Home Inspiration Youtuber Ganesh Karanth | Youtuber ಗಣೇಶ್ ಕಾರಂತ್ & Clean Comedy!

Youtuber Ganesh Karanth | Youtuber ಗಣೇಶ್ ಕಾರಂತ್ & Clean Comedy!

0
Avinash Kamath with Ganesh Karanth

Youtuber Ganesh Karanth

Ganesh Karanth : ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದು ಕೆಲವೊಮ್ಮೆ ಗೋಚರವಾಗುವುದಿಲ್ಲ. ಕೆಲವರು ಅದನ್ನು ಗುರುತಿಸಿ ಅದರತ್ತ ಗಮನ ಹರಿಸಿ ನಿರಂತರ ಕಾರ್ಯಪ್ರವೃತ್ತರಾದಾಗ ಪ್ರತಿಭೆ ಕಾರಣಕ್ಕಾಗಿಯೇ ಅವರನ್ನು ಗುರುತಿಸುವಂತಾಗುತ್ತದೆ. ಇನ್ನು ಕೆಲವರಿಗೆ ಒಂದಲ್ಲ ಹಲವು ಪ್ರತಿಭೆಗಳನ್ನು ಭಗವಂತ ಕರುಣಿಸಿರುತ್ತಾನೆ. ಇವರು ನಿಜಕ್ಕೂ ಅದೃಷ್ಟವಂತರು! ಸಾರ್ವಜನಿಕ ಜೀವನದಲ್ಲಿ ನಾನು ಇಂತಹ ಹಲವರನ್ನು ಕಂಡಿದ್ದೇನೆ. ಇತ್ತೀಚೆಗಿನ ವರ್ಷಗಳಲ್ಲಿ ಅಗಾಧವಾಗಿ ಸೆಳೆದ ಪ್ರತಿಭೆಗಳಲ್ಲಿ ಗಣೇಶ ಕಾರಂತ್ ಪ್ರಾಯಶಃ ಮುಂಚೂಣಿಯಲ್ಲಿ ಕಾಣಸಿಗುತ್ತಾರೆ..

ಉಡುಪಿ ಮೂಲದ ಇವರು IT ಉದ್ಯೋಗಿ. ನಾಡಿಗೆ ಇವರು ಪರಿಚಯವಾಗಿದ್ದು ಖಾಸಗಿ ಪ್ರತಿಷ್ಠಿತ ವಾಹಿನಿಯಲ್ಲಿ ಪ್ರಸಾರವಾದ ‘ಕನ್ನಡ ಕೋಗಿಲೆ’ ಎಂಬ ಹೆಸರಾಂತ ರಿಯಾಲಿಟಿ ಶೋ ಮೂಲಕ. ಹಾಡುಗಾರಿಕೆಯಿಂದ ಗಮನ ಸೆಳೆದ ಗಣೇಶ್ ಫೈನಲ್ಸ್ ತಲುಪುತ್ತಾರೆ. ಟಿವಿ ಕಾರ್ಯಕ್ರಮ ಮುಗಿದ ನಂತ್ರ Youtube Content Creationನತ್ತ ತಮ್ಮ ಗಮನ ಹರಿಸುತ್ತಾರೆ. ಅಂದ ಹಾಗೆ ನನಗೆ ಇವರ ಪರಿಚಯ ಆಗಿದ್ದು ಬೆಂಗಳೂರಿನ ನಮ್ಮೂರ ಹಬ್ಬದ ಬೃಹತ್ ವೇದಿಕೆಯಲ್ಲಿ. ಅವರು ಹಾಡಲು ಬಂದಿದ್ದರು ನಾನು ನಿರೂಪಕನಾಗಿದ್ದೆ. ಇನ್ನು ಮುಂದೆ ನಾನು ಹೇಳ ಹೊರಟಿರುವ ಅಷ್ಟೂ ವಿಷಯಗಳು ಅವರ Videoಗಳಿಂದ ನಾನು ಗಮನಿಸಿದ ಅಂಶಗಳಾಗಿವೆ.

Avinash Kamath with Ganesh Karanth
Ganesh Karanth’s performance at Kannada Kogile.

Youtube Content Creation ಸುಲಭದ ಮಾತಲ್ಲ !

ಹೌದು. ಈಗಂತೂ Youtube ಕಾಲ. ಟಿವಿ ಬೇಕಾಗಿಲ್ಲ ಎನ್ನುವಷ್ಟರ ಮಟ್ಟಿಗೆ Youtubeಗೆ ನಾವು ಹೊಂದಿಕೊಂಡಿದ್ದೇವೆ. ಅದರ Algorithm ಅರ್ಥ ಮಾಡಿಕೊಳ್ಳುವುದು ಸುಲಭವಿಲ್ಲ. ಅಲ್ಲಿ Content ತಯಾರಿಸುವುದು ಸವಾಲಿನ ಕೆಲಸ ಯಾಕಂದ್ರೆ ಸಾಮಾಜಿಕ ಜಾಲತಾಣದಲ್ಲಿ ನೀವು ನಿರೀಕ್ಷೆ ಇಟ್ಟ ವಿಡಿಯೋಗಳು ಗೆಲ್ಲದೇ ಇದ್ದ ಉದಾಹರಣೆಗಳು ಸಾಕಷ್ಟಿವೆ. ಈ ಬಗ್ಗೆ ಇನ್ನೊಮ್ಮೆ ಪ್ರತ್ಯೇಕವಾಗಿ ಬರೆಯುತ್ತೇನೆ.

About Ganesh Karanth Youtube Channel | ಗಣೇಶ್ ಗೆದ್ದದ್ದು ಹೇಗೆ ?

ಅವರು ‘ ಕನ್ನಡ ಕೋಗಿಲೆ’ ಗೆಲ್ಲದಿದ್ದರೂ ಇಲ್ಲಿ ಗೆಲ್ಲುತ್ತಾರೆ. ಜನರಿಗೆ ಇಷ್ಟವಾಗುತ್ತಾರೆ. ಯಾಕೆ? ಒಂದೊಂದಾಗೆ ನೋಡೋಣ..

* Contentಗಳಲ್ಲಿ ನೈಜತೆ

ಅವರು ಆಯ್ಕೆ ಮಾಡುವ ಒಂದೊಂದು Concept ಕೂಡ ವಿಭಿನ್ನ.ಅದು ನೋಡುಗನ ಬದುಕಿನ ಸಾರ ಎನಿಸುತ್ತದೆ. ನಮ್ಮ ಬದುಕಲ್ಲಿ ನಡೆದ, ನಡೆಯಬಹುದಾದ ವಿಷಯಗಳಿಗೆ ಹಾಸ್ಯ ಲೇಪನ ಹಚ್ಚಿ ಗಂಭೀರ ವಿಷಯಗಳನ್ನೂ ತಿಳಿಯಾಗಿ ಸ್ವೀಕರಿಸುವ ನಿಟ್ಟಿನಲ್ಲಿ ಪರೋಕ್ಷ ಸಂದೇಶ ನೀಡುತ್ತದೆ.

* ಅಭಿನಯ ಚತುರತೆ

ಅವರ ವಿಡಿಯೋಗಳಲ್ಲಿ ಕೆಲವೊಮ್ಮೆ ಒಂದು, ಎರಡು ಹೆಚ್ಚೆಂದರೆ 4 ಪಾತ್ರಗಳು ಕಾಣಸಿಕ್ಕಿವೆ. ಬೇರೆ ಬೇರೆ ಪಾತ್ರಗಳಲ್ಲಿ ಇವರೇ ಕಾಣಿಸಿಕೊಂಡು ಆ ಪಾತ್ರಗಳಿಗೆ ಜೀವ ತುಂಬುತ್ತಾರೆ. ಸಹಜ ಅಭಿನಯ , ನೈಜ ಅಭಿವ್ಯಕ್ತಿ ಪಾತ್ರಗಳನ್ನು ಇನ್ನಷ್ಟು ಆಪ್ತವಾಗಿಸುತ್ತವೆ.

* ಸಂಭಾಷಣೆ

ದಿನನಿತ್ಯ ಬಳಸುವ ಭಾಷೆ, ಉಡುಪಿ ಕನ್ನಡ ಶೈಲಿ ವಿಡಿಯೋಗಳಿಗೆ ಇನ್ನಷ್ಟು ಮೆರುಗು ನೀಡುತ್ತವೆ. ಆಯಾಯ Trending ವಿಷಯಗಳ ಕುರಿತು ಹೇಳುವ ಪರಿ ನಮ್ಮದೇ ಭಾವನೆಗಳನ್ನು ಹೇಳಿದಂತೆ ಅನಿಸಿಬಿಡುತ್ತದೆ. ಉದಾ : ಪುನೀತ್ ರಾಜಕುಮಾರ್ ಗತಿಸಿದಾಗ ಟಿವಿ ವಾಹಿನಿಗಳು Shivarajkumar ಸಂದರ್ಶನ ನಡೆಸಿದ ಪರಿಯ ಕುರಿತು ಹೇಳಿದ್ದು ಸೂಕ್ತವಾಗಿತ್ತು ಮತ್ತು ಆ ಸಂದರ್ಶನಗಳನ್ನು ಗಮನಿಸಿದ ಎಲ್ಲರ ಭಾವನೆಯು ಅದೇ ಆಗಿತ್ತು.’ಗರುಡ ಗಮನ ವೃಷಭ ವಾಹನ’ ಸಿನಿಮಾ ಬಿಡುಗಡೆಯಾದ ಸಂದರ್ಭದ ವಿಡಿಯೋ ಎಷ್ಟೋ Corporate ಉದ್ಯೋಗಿಗಳ ಅಂತರಾಳ, ಬೇಗುದಿ ಹೊರಹಾಕಿದಂತೆ ಭಾಸವಾಗಿತ್ತು.

* 3 – 4 ನಿಮಿಷಗಳು

 ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯಗಳು ಚಿಕ್ಕದಾಗಿದ್ದಷ್ಟು ವೀಕ್ಷಣೆ ಹೆಚ್ಚು. ಹಾಗಿರುವಾಗ ಒಂದು ರಸವತ್ತಾದ, ಕೆಲವೊಮ್ಮೆ ಗಂಭೀರವಾದ ವಿಷಯಗಳನ್ನು ಕೇವಲ 4 ನಿಮಿಷದೊಳಗೆ ಹೇಳುವ ಸವಾಲಿನ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುತ್ತಾರೆ ಗಣೇಶ್.

Ganesh Karanth's Family Pics
Ganesh Karanth’ & Family

* Ganesh Karanth Entertainment videos | ಮನೋರಂಜನೆ

ವಿಷಯ, ಮನೋರಂಜನೆ, ತಮಾಷೆ, ಹಾಸ್ಯ ಅವರ ಎಲ್ಲಾ ವಿಡಿಯೋಗಳಲ್ಲೂ ಹಾಸು ಹೊಕ್ಕಾಗಿದೆ. ತನ್ನ ತಾಯಿ, ಪತ್ನಿಯನ್ನೇ ಪಾತ್ರಧಾರಿಗಳಾಗಿಟ್ಟುಕೊಂಡು ಅವರಿಂದ ಅಭಿನಯ ಮಾಡಿಸಿದಾಗ ನೋಡುಗರಿಗೆ ತಮ್ಮ ತಾಯಿ, ಪತ್ನಿ ನೆನಪಾಗಿಸುವುದು ಒಂದು ಪರೋಕ್ಷ ಪ್ರಯತ್ನ ಎನ್ನಬಹುದು. ಈ ನಡುವೆ Janardhan sir, Beard Balaka ಪಾತ್ರಗಳ ಸೃಷ್ಟಿ ಅವರ ಸೃಜನಶೀಲತೆಯ ಬಹು ದೊಡ್ಡ ಆಯಾಮವನ್ನೇ ತೋರಿಸುತ್ತದೆ. ಈ Beard Balaka ಒಬ್ಬ ‘ಅಸಾಮಾನ್ಯ’ ಪ್ರತಿಭೆ. ತನ್ನನ್ನು ತಾನೇ ಹೊಗಳುವುದು, ಗಾಳಿ ಬಂದ ಕಡೆಗೆ ಕೊಡೆ ಹಿಡಿಯುವುದು, ತರ್ಲೆ ಪ್ರಶೆಗಳನ್ನು ಕೇಳುವ ಪರಿ ಕಂಡಾಗ ನೋಡುಗರಿಗೆ ಆ ಪಾತ್ರದಲ್ಲಿ ತಮ್ಮನ್ನು ತಾವೇ ಕಲ್ಪಿಸಿ ಅಥವಾ ತಮ್ಮವರನ್ನು ಕಂಡಂತಾಗುತ್ತದೆ ! ಮುಂದೊಂದಿನ Beard Balaka ಸಿನೆಮದಲ್ಲೊಂದು ಪಾತ್ರವಾದರೆ ಆಶ್ಚರ್ಯ ಪಡಬೇಕಿಲ್ಲ !

Beard Balaka
Ganesh Karanth as Beard Balaka

* ಸಂಕಲನ

 ನಮ್ಮ ವಿಡಿಯೋಗಳಲ್ಲಿ ಬೇರೆ ಹಾಡುಗಳು, ಹಿನ್ನೆಲೆ ಸಂಗೀತ, effects ಇತ್ಯಾದಿಗಳನ್ನು ಬಳಸುವಂತಿಲ್ಲ. ಎಲ್ಲಾ ವಿಡಿಯೋಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಅದರಲ್ಲೇ ಸಂಕಲಿಸಿ, ಸನ್ನಿವೇಶಕ್ಕೆ ಸೂಕ್ತ ಎನಿಸುವ ಹಿನ್ನೆಲೆ ಸಂಗೀತ, ಹಾಡಿನ ತುಣುಕುಗಳನ್ನು ಬಳಸುವುದು ಒಂದು ಚಾಕಚಕ್ಯತೆಯೇ ಸರಿ!

* ನಿರಂತರತೆ

 ಎಲ್ಲದಕ್ಕಿಂತ ಹೆಚ್ಚಾಗಿ ನೋಡುಗರನ್ನು ಹಿಡಿದಿಟ್ಟುಕೊಳ್ಳಲು ನಿರಂತರ ವಿಡಿಯೋಗಳನ್ನು ಪ್ರಸಾರ ಮಾಡಬೇಕು. ವೃತ್ತಿಪರ Youtubers ಪ್ರತಿದಿನ ಹೊಸ ಪರಿಕಲ್ಪನೆಗಳನ್ನು ಹುಡುಕುತ್ತಿರುವಾಗ ಇವರ conceptಗಳು ನಮ್ಮ ಸುತ್ತಲೇ ನಡೆಯುವ ವಿಷಯಗಳನ್ನು ಆಧರಿಸಿರುವುದು ಬದುಕಿನ ಕುರಿತು ಅವರ ಸೂಕ್ಷ್ಮ ಸಂವೇದನೆಯನ್ನು ತೋರಿಸುತ್ತದೆ.

ಬಹು ಮುಖ್ಯವಾದ ಮತ್ತೊಂದು ಅಂಶವೆಂದರೆ ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮವನ್ನು ತನ್ನ ಪ್ರತಿಭೆ ಪ್ರದರ್ಶಿಸಲು ಅತ್ಯಂತ ಪ್ರಭಾವಶಾಲಿಯಾಗಿ ಬಳಸಿ ಗೆಲ್ಲಬಹುದು ಎಂದು ಬೇರೆಲ್ಲರಿಗಿಂತ ಸ್ವಲ್ಪ ಭಿನ್ನವಾಗೇ ತೋರಿಸಿಕೊಟ್ಟಿದ್ದಾರೆ ಗಣೇಶ್ !

ಕನ್ನಡದಲ್ಲಿ ನೂರಾರು Youtube Channelಗಳಿವೆ. ಕೆಲವಷ್ಟು ಮಾತ್ರ ಸಭಿಕರನ್ನು ತಲುಪಿವೆ. ಸತತ ಪ್ರಯತ್ನ, ಪ್ರತಿಭೆ, ಮನೋರಂಜನೆ ಹೀಗೆ ಎಲ್ಲವನ್ನು ಒಳಗೊಂಡ ಗಣೇಶ್ Ganesh Karanth ವಿಡಿಯೋಗಳು ನಿಜಕ್ಕೂ ಭಿನ್ನ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸುಖಾಸುಮ್ಮನೆ ಯಾವ ವಿಷಯವೂ ಇಲ್ಲದ, ಕಾಲೆಳೆಯುವ, ಪ್ರಸಾರವಾದ ದಿನಕ್ಕೆ ಮಾತ್ರ ಸೀಮಿತವೆನಿಸುವ, ವೈಯಕ್ತಿಕ ಬದುಕನ್ನು ಹರಾಜು ಹಾಕುವ Contentಗಳ ಮಧ್ಯೆ ಒಳ್ಳೆ Videoಗಳು ಯಾರದ್ದೇ ಇರಲಿ ಅವು ಕಳೆದು ಹೋಗದಿರಲಿ.. ವಿಡಿಯೋಗಳಿಗೆ ವೀಕ್ಷಕರು ಕಡಿಮೆ ಆದಾಗ ಧೃತಿಗೆಡದೆ ಪ್ರಯತ್ನ ಜಾರಿಯಿರಲಿ..

All good things will definitely see success. But it may be delayed and not denied.

ಅವರ ಕಂಟೆಂಟ್ ಕುರಿತು ನಿಮಗೇನನಿಸುತ್ತೆ ? ಕಾಮೆಂಟ್ ಮೂಲಕ ತಿಳಿಸಲು ಮರೆಯಬೇಡಿ.. ಹೇಳಲು ಹೋದರೆ ಸಾವಿರ ಮಾತಿದೆ …


LEAVE A REPLY

Please enter your comment!
Please enter your name here