ಕಳೆದೆರಡು ವರ್ಷಗಳಿಂದ ಕೊರೊನ ಕಾರಣದಿಂದಾಗಿ ‘ಅಷ್ಟಮಿ ಅಷ್ಟಕ್ಕಷ್ಟೇ’ ಎಂಬಂತೆ ಕೇವಲ ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈ ವರ್ಷ ಜನರು ಹುಮ್ಮಸ್ಸಿನಿಂದ ಹಬ್ಬದಲ್ಲಿ ಪಾಲ್ಗೊಂಡು ಕೃಷ್ಣ ಜನ್ಮಾಷ್ಟಮಿಗೆ ಎಲ್ಲಿಲ್ಲದ ಕಳೆ ಬಂತು.

ಈ ಮಧ್ಯೆ ಉಡುಪಿಯ Abharana Jewellers ನ ಉದ್ಯೋಗಿ ಕವನ ಪ್ರಭು ಫುಲ್ ವೈರಲ್ ಆಗಿದ್ದಾರೆ! ಅವರು ಕಾರ್ಯನಿರ್ವಹಿಸುತ್ತಿರುವ ‘ ಆಭರಣ’ ಮುಂಭಾಗ ಹುಲಿವೇಷ ತಂಡದೊಂದಿಗೆ ಯಾವುದೇ ಅಳುಕಿಲ್ಲದೆ ಧರಿಸಿದ ಸಮವಸ್ತ್ರದಲ್ಲೇ ಕುಣಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಯದ್ವಾತದ್ವಾ ವೈರಲ್ ಆಗಿದೆ. ಇವರ ಹೆಜ್ಜೆ, ಹುಮ್ಮಸ್ಸು ಕಂಡ ಜನರು ಫುಲ್ ಫಿದಾ ಆಗಿದ್ದಾರೆ.

ಪರಿಚಯಸ್ಥರಾದ ದಿನೇಶ ಶೆಟ್ಟಿಗಾರ್ ಮುಖಾಂತರ ನಾನಿವರನ್ನು ಮಾತನಾಡಿಸಿದಾಗ …

‘ನಿಮ್ಮ ಡಾನ್ಸ್ ಚೆನ್ನಾಗಿತ್ತು ಎನ್ನುತ್ತಿದ್ದಾರೆ. ಬಹಳ ಮಂದಿ ಮೆಸೇಜ್ ಕಳುಹಿಸುತ್ತಿದ್ದಾರೆ. ಸಂಸ್ಥೆಯವರಿಗೂ ಖುಷಿ ಇದೆ. ಮೊದಲು ನಾನೇ ಡಾನ್ಸ್ ಆರಂಭಿಸಿದೆ ನಂತ್ರ ನನ್ನ ಗೆಳತಿ ಹರ್ಷಿಣಿ ಸೇರಿಕೊಂಡರು. ನಾನು ಶಾಲಾ ದಿನಗಳಲ್ಲಿ ಕುಣಿಯುತ್ತಿದ್ದೆ. ತಾಸೆ ಪೆಟ್ಟಿಗೆ ಯಾರಿದ್ದಾರೆ, ಯಾರಿಲ್ಲ ಅನ್ನೋ ಆಲೋಚನೆ ನನಗಿರಲಿಲ್ಲ. ಅವಕಾಶ ಸಿಕ್ಕಿತು ಅಂತ ಕುಣಿದು ಬಿಟ್ಟೆ, ಅಷ್ಟೇ’ ಎಂದು ಖುಷಿ ಹಂಚಿಕೊಂಡರು.

ಹುಲಿವೇಷ ನೃತ್ಯ ಗುರು ಇಲ್ಲದ ವಿದ್ಯೆ. ತಾಸೆ ಸದ್ದು ಎಂಥವರನ್ನು ಬೇಕಾದರೂ ಕುಣಿಯುವಂತೆ ಮಾಡುತ್ತದೆ!

ಹೇಳಲು ಹೋದರೆ ಸಾವಿರ ಮಾತಿದೆ ..