ಕಿರಣ್ ಕುಮಾರ್ ಕೊಡ್ಗಿ:
ಹಿರಿಯ ರಾಜಕೀಯ ಮುತ್ಸದಿ,ಕರಾವಳಿ ಬಿಜೆಪಿಯ ಭೀಷ್ಮ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿಯವರ ಪುತ್ರ. ಐದು ಬಾರಿ ಕುಂದಾಪುರದ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟರ ನಲವತ್ತು ವರುಷದ ಸಹವರ್ತಿ. ಆಹಾರ ನಿಗಮದ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಿರಣ್ ಕೊಡ್ಗಿ ಕಳೆದ ಆರು ಚುನಾವಣೆಗಳಲ್ಲಿ ಕುಂದಾಪುರ ಭಾಜಪವನ್ನು ಸಂಘಟಿಸಿದ ಚಾಣಾಕ್ಷ. ಹಿತ ಮಿತ ಭಾಷಿಯ ಕಿರಣ್ ಹಲವರ ಮಧ್ಯೆ ಕೆಕೆ ಎಂದು ಚಿರಪರಿಚಿತರು.

ದಿನೇಶ್ ಹೆಗ್ಡೆ ಮೊಳಹಳ್ಳಿ:
ಮೊಳಹಳ್ಳಿ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನೇಕ ಸಹಕಾರಿ ಕ್ಷೇತ್ರದಲ್ಲಿ ದುಡಿದ ಧುರೀಣ‌.ಗುತ್ತಿಗೆದಾರರಾಗಿರುವ ಇವರು ಕ್ರೀಡೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಮತ್ತು ದಾನ ಧರ್ಮಗಳ ಮೂಲಕ ಆ ಭಾಗದ ಜನಾನುರಾಗಿ. ಹಿತ ಮಿತ ಭಾಷಿಯಾಗಿರುವ ಇವರು ಸರ್ವ ಧರ್ಮದವರನ್ನು ಒಗ್ಗೂಡಿಸಿ ಹೊಸ ಕುಂದಾಪುರ ಕಟ್ಟಿ ನೂತನ ಕಾಂಗ್ರೆಸ್ ನಾಯಕರಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣ ತೋರುತ್ತಿದ್ದಾರೆ.