Home Trending ಕಾರ್ಕಳದ ನೂತನ ಸಾರಥಿ ಯಾರಾಗಬಹುದು ? POLL Survey!

ಕಾರ್ಕಳದ ನೂತನ ಸಾರಥಿ ಯಾರಾಗಬಹುದು ? POLL Survey!

1

ಸುನಿಲ್ ಕುಮಾರ್

ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ 3 ಬಾರಿ ಸ್ಪರ್ಧಿಸಿದ ವಿ ಸುನೀಲ್ ಕುಮಾರ್ ಪ್ರಸ್ತುತ ರಾಜ್ಯ ಸರಕಾರದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ತನಗೆ ಶಾಲು ಬೇಡ ಪುಸ್ತಕ ನೀಡಿ ಎಂಬ ಕರೆ ಕೊಟ್ಟು ಅಭಿಮಾನಿಗಳಿಂದ ಸಾವಿರಾರು ಕೃತಿಗಳನ್ನು ಸಂಗ್ರಹಿಸಿ ಲೈಬ್ರರಿಗೆ ನೀಡಿದ್ದಾರೆ. ಕೋಟಿ ಕಂಠ ಗಾಯನದಂತಹ ವಿಭಿನ್ನ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ.ತನ್ನ ರಾಜಕೀಯ ಜೀವನವನ್ನು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗದ ನಾಯಕನಾಗಿ ಆರಂಭಿಸಿದರು. ಪರಿಸರ ಪರ ಕಾಳಜಿ ಹೊಂದಿರುವ ಸುನಿಲ್ ಒಬ್ಬ ಯುವ ನಾಯಕರು, ಪ್ರಖರ ವಾಗ್ಮಿ, ಉತ್ತಮ ಆಡಳಿತಗಾರ ಮತ್ತು ಸಂಘಟಕರಾಗಿದ್ದಾರೆ. ಕೋಟಿ ಚೆನ್ನಯ ಥೀಮ್ ಪಾರ್ಕ್, ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಸೇರಿದಂತೆ ಕಾರ್ಕಳ ಉತ್ಸವದಂತಹ ಬೃಹತ್, ವಿಭಿನ್ನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.

ಮುನಿಯಾಲು ಉದಯ ಕುಮಾರ್ ಶೆಟ್ಟಿ

ಜನರು, ಕಾರ್ಯಕರ್ತರ ನಡುವೆ ‘ಉದಯಣ್ಣ’ ಎಂದೇ ಜನಪ್ರಿಯರಾಗಿದ್ದಾರೆ. M.Tech ಪದವೀಧರರಾದ ಇವರು ಬಹು ಕೋಟಿ ಉದ್ಯಮಿ ಮತ್ತು ಕೊಡುಗೈದಾನಿ. ತಾನು ಸ್ಥಾಪಿಸಿರುವ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಕ್ರೀಡೆ,ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಅರೋಗ್ಯ ಸಂಬಂಧಿ ಚಟುವಟಿಕೆಗಳಿಗೆ ಭರಪೂರ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ‘ರಾಜಕಾರಣದಲ್ಲಿ ಜಾತಿ ಅಲ್ಲ ನೀತಿ ಮುಖ್ಯ’ ಎನ್ನುವ ಶೆಟ್ಟರು ಎಲ್ಲಾ ಧರ್ಮದವರನ್ನು ಒಗ್ಗೂಡಿಸಿ ಸೌಹಾರ್ದ ಕಾರ್ಕಳ ಕಟ್ಟುವ ಕನಸು ಕಂಡಿದ್ದಾರೆ. ಪರೋಪಕಾರಿ, ಲೋಕಹಿತೈಷಿ ಮತ್ತು ಉತ್ತಮ ಮಾತುಗಾರರಾಗಿರುವ ಇವರು ಸರಳತೆ, ಮಾನವೀಯತೆಯ ಪ್ರತೀಕದಂತೆ ಬದುಕುತ್ತಿರುವ ಸ್ನೇಹಜೀವಿ.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್ ಶ್ರೀ ರಾಮ ಸೇನೆಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷರು.1963ರಲ್ಲಿ ಬೆಳಗಾವಿಯ ಹುಕ್ಕೇರಿಯಲ್ಲಿ ಜನಿಸಿದ ಮುತಾಲಿಕ್ ಹಿಂದೂ ಧರ್ಮದ ರಕ್ಷಣೆಗಾಗಿ ಧ್ವನಿ ಎತ್ತಿರುವ ನಾಯಕರು.ಬಜರಂಗದಳದಿಂದ ಹೊರಬಂದ ನಂತರ ಶಿವಸೇನೆಯ ಕರ್ನಾಟಕ ಘಟಕವನ್ನು ರಚಿಸಿದರು. ಬೆಳಗಾವಿ ಗಡಿ ವಿವಾದದ ಹಿನ್ನೆಲೆಯಲ್ಲಿ ಶಿವಸೇನೆ ತೊರೆದು ಶ್ರೀರಾಮಸೇನೆಯನ್ನು ಸ್ಥಾಪಿಸಿದರು.ಕಳೆದ ಬಾರಿ ಪ್ರಹ್ಲಾದ್ ಜೋಷಿ ವಿರುದ್ಧ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಹಿಂದೂ ವಿಚಾರಗಳ ಪರ ನಿಂತು ಹೋರಾಡುವ ಇವರು ಪ್ರಖರ ವಾಗ್ಮಿಯೂ ಆಗಿದ್ದಾರೆ. ಈ ಬಾರಿ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.


 

1 COMMENT

LEAVE A REPLY

Please enter your comment!
Please enter your name here