Home Shorts Who is a true kannadiga? ಜಯಂತ ಕಾಯ್ಕಿಣಿ ಆವತ್ತು ಹೀಗಂದಿದ್ರು.

Who is a true kannadiga? ಜಯಂತ ಕಾಯ್ಕಿಣಿ ಆವತ್ತು ಹೀಗಂದಿದ್ರು.

1
Avinash Kamath abudhabi

67 ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ರಾಜ್ಯ ಸರ್ಕಾರ ಕಳೆದೆರಡು ವರ್ಷಗಳಿಂದ ಹಮ್ಮಿಕೊಂಡಿರುವ ಸೃಜನಶೀಲ ಕಾರ್ಯಕ್ರಮಗಳಿಂದ ಉತ್ಸವಕ್ಕೆ ವಿಶೇಷ ಮೆರುಗು ಬಂದಿದೆ. ಕಳೆದ ವರ್ಷ ಲಕ್ಷ ಕಂಠ ಗಾಯನವಾದರೆ ಈ ಬಾರಿ ಕೋಟಿ ಕಂಠ ಗಾಯನದ ಮೂಲಕ ರಾಜ್ಯದ ಸೊಬಗು, ಶ್ರೇಷ್ಠತೆ ಸಾರುವ ಸುಪ್ರಸಿದ್ಧ ಸಾಹಿತಿಗಳ ಗೀತೆಗಳು ಕೋಟಿ ಕಂಠಗಳಲ್ಲಿ ಮೊಳಗಿದ್ದು ಕಣ್ಣಿಗೆ ಹಬ್ಬವಾದರೆ ಕೇಳಲು ಇಂಪಾಗಿತ್ತು.’ಒಗ್ಗಟಿನ ಬಲ’ ಏನೆಂಬುವುದು ಪರೋಕ್ಷವಾಗಿ ಈ ಚಟುವಟಿಕೆ ಸಾರಿತು. ಹೀಗೆ ‘ ಹಸುರಿನ ಬನಸಿರಿಗೆ ಒಲಿದ ಸೌಂದರ್ಯ ಸರಸ್ವತಿ ಧರೆಗಿಳಿದ’ ಪುಣ್ಯಭೂಮಿಯಲ್ಲಿ ಜನಿಸಿದ ನಮ್ಮ ಬಾಳು ಧನ್ಯ.

ಈ ಲೇಖನದಲ್ಲಿ ನಾನು ಹೇಳ ಹೊರಟಿರುವುದು ಕನ್ನಡದ ಕುರಿತ ನನ್ನ ಆಸಕ್ತಿ ಮತ್ತು ಕನ್ನಡ ನನಗೊದಗಿಸಿದ ಅವಕಾಶಗಳ ಬಗ್ಗೆ. ಹೌದು, KGಯಿಂದ PGವರೆಗೆ ನಾನೋದಿದ್ದು ಆಂಗ್ಲ ಮಾಧ್ಯಮದಲ್ಲಾದರೂ ನನ್ನ ಒಲವಿರುವುದು ಕನ್ನಡದ ಕಡೆ.8 ನೇ ತರಗತಿಯಿಂದ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಆಯ್ದುಕೊಂಡೆ ಜೊತೆಗೆ ಎಲ್ಲಾ ಭಾಷೆಗಳಿಗಿಂತ ಕನ್ನಡಲ್ಲೇ ಗರಿಷ್ಟ ಅಂಕ ಪಡೆಯುತ್ತಿದ್ದೆ. ಕನ್ನಡ ಪತ್ರಿಕೆಗಳನ್ನೇ ಓದಿ ಬೆಳೆದ ನನಗೆ ಕನ್ನಡದ ಹೆಸರುವಾಸಿ ಸಾಹಿತಿಗಳು, ಲೇಖಕರ ಕೃತಿಗಳನ್ನು ಗಮನಿಸುತ್ತಿದ್ದೆ. ಕನ್ನಡ ಸಿನಿಮಾ ಮತ್ತು ಗೀತೆಗಳ ಮೇಲೆ ಅಪಾರ ಆಸಕ್ತಿ ಇದ್ದ ಕಾರಣ ಸಿನಿಮಾ ಗೀತಗಳ ಕುರಿತು Ph.d ಪದವಿ ಪಡೆಯಬೇಕೆಂಬ ಹಂಬಲ ಇತ್ತಾದರೂ ಅದಕ್ಕೆ ಕಾಲ ಮಾತ್ರ ಕೂಡಿ ಬಂದಿಲ್ಲ! ಬರಬಹುದೇ? ತಿಳಿದಿಲ್ಲ.. !

ಕನ್ನಡದ ಕುರಿತು ಹೊರರಾಜ್ಯ, ದೇಶದಲ್ಲಿ ಡಿಂಡಿಮ ಬಾರಿಸಿದ ಹಲವರನ್ನು ಭೇಟಿಯಾಗುವ ಅವಕಾಶ ನನಗೆ ಆಗಾಗ  ದೊರಕಿದೆ. ಅಲ್ಲಿದ್ದುಕೊಂಡು ಸಮಯ ಹೊಂದಿಸಿ, ತಂಡ ಕಟ್ಟಿಕೊಂಡು ಒಂದಿಷ್ಟು ಚಟುವಟಿಕೆಗಳನ್ನು ಆಯೋಜಿಸುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಕಾರ್ಯಕ್ರಮ ಆಯೋಜನೆ ಎನ್ನುವುದು ಸವಾಲು ಮತ್ತು ಚಾಕಚಕ್ಯತೆಯ ಕೆಲಸ. ಸೃಜನಶೀಲ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ Foreign, Gulf ರಾಷ್ಟ್ರಗಳಲ್ಲಿ ಕನ್ನಡ ಸಂಘಗಳು ಆಯೋಜಿಸುತ್ತಲೇ ಬಂದಿವೆ. ಇಂತಹ ಹಲವು ಕೂಟಗಳಲ್ಲಿ UAE ರಾಷ್ಟ್ರದ Abudhabi ಕನ್ನಡ ಸಂಘ ಮುಂಚೂಣಿಯಲ್ಲಿ ಕಾಣಸಿಗುತ್ತದೆ ಎಂದರೆ ತಪ್ಪಿಲ್ಲ.ಕನ್ನಡಕ್ಕಾಗಿ ಟೊಂಕ ಕಟ್ಟಿ ನಿಂತು ವಿಶೇಷ ಸಾಧನೆಗೈದ ಮಹನೀಯರಲ್ಲೊಬ್ಬರಾದ Abudhabiಯ ಸರ್ವೋತ್ತಮ ಶೆಟ್ಟರು ನನ್ನನ್ನು ಅವರಲ್ಲಿಗೆ ಕರೆಸಿ ಪ್ರತಿಷ್ಠಿತ ಅಬುಧಾಬಿ ಕನ್ನಡ ಸಂಘದ ಇಡೀ ದಿನದ ಕಾರ್ಯಕ್ರಮವನ್ನು ನಿರೂಪಿಸುವ ಅಪೂರ್ವ ಅವಕಾಶವನ್ನು ಬರೋಬ್ಬರಿ 3 ಬಾರಿ ಕಲ್ಪಿಸಿಕೊಟ್ಟರು!! Thanks Shettre… ಮೂರನೇ ಬಾರಿಗೆ ಅಲ್ಲಿ ಕನ್ನಡ ಕಲರವ ಮೊಳಗಿಸಲು ರಾಜ್ಯದ ಆಯ್ದ ಜಿಲ್ಲೆಗಳಿಂದ ಹಲವು ಕ್ಷೇತ್ರದ ಸಾಧಕರು, ಪ್ರತಿಭಾನ್ವಿತರು ಪ್ರದರ್ಶನ ನೀಡಲು ಬಂದಿದ್ದರು. ‘ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ’ ಎಂಬ ಶೀರ್ಷಿಕೆಯಲ್ಲಿ ಆಯೋಜಿಸಲಾದ ಇಡೀ ದಿನದ ಕಾರ್ಯಕ್ರಮವನ್ನು ಮಂಗಳೂರಿನ ಆಯೋಜಕರು ಆಯೋಜಿಸಿದ್ದರಾದರೂ ಶೆಟ್ಟರು ನಿರೂಪಣೆಗೆ ನನ್ನ ಹೆಸರನ್ನು ಶಿಫಾರಸು ಮಾಡಿ ಅವಕಾಶ ಕಲ್ಪಿಸಿದ್ದರು. ಇದಕ್ಕೂ ಮುಂಚೆ ಸತತ ಎರಡನೇ ಬಾರಿಗೆ ‘ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನೀನೇ ಬರಬೇಕು’ ಎಂದಾಗ ‘ ಶೆಟ್ಟ್ರೆ ಈ ವರ್ಷವೂ ನೀವೆಲ್ಲಾ ನನ್ನದೇ ಮುಸುಡಿ ನೋಡಬೇಕಾಗುತ್ತದೆ, ಆಲೋಚನೆ ಮಾಡಿ’ ಎಂದಿದ್ದೆ. ‘ನಮ್ಮ meetingನಲ್ಲಿ ಅಂತಿಮಗೊಳಿಸಿದ್ದಾಗಿದೆ, ನೀನು ಬಾ ‘ ಎಂದು ತಾಕೀತು ಮಾಡಿದ್ದರು. ಹೀಗೆ ಒಟ್ಟು 3 ಬಾರಿ ಕನ್ನಡ ಮತ್ತು ಒಂದು ಬಾರಿ ತುಳು ಕೂಟದ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದ ಸರ್ವೋತ್ತಮ ಶೆಟ್ಟರಿಗೆ ನಾನು ಆಭಾರಿಯಾಗಿದ್ದೇನೆ.

Sarvotham Shetty, Gulf Kannadiga
Avinash Kamath compering Abudhabi Kannada sangha program

ಈ ಮಧ್ಯೆ Qatar ರಾಷ್ಟ್ರದಲ್ಲೂ ಕನ್ನಡ ಸಂಘದಿಂದ ಅವಕಾಶ ದೊರಕಿತು.2010 ರಲ್ಲಿ ‘ Ek Sham Rafi Ke Nam’ ಕಾರ್ಯಕ್ರಮ ನಿರೂಪಣೆ ತೆರಳಿದ್ದಾಗ ಅಲ್ಲಿ ಕತಾರ್ ಕನ್ನಡಿಗರ ಎಲ್ಲರ ನೆಚ್ಚಿನ ನಾಯಕ, ಉದ್ಯಮಿ  ರವಿ ಶೆಟ್ಟರ ಪರಿಚಯವಾಯಿತು. ಅವರೊಂದಿಗಿನ ಒಡನಾಟ ಮತ್ತೆರಡು ಬಾರಿ ಕತಾರ್ ಗೆ ಭೇಟಿ ನೀಡಿ ಅವರ ಕನಸಿನ, ಬಹು ನಿರೀಕ್ಷೆಯ ‘ ಕರ್ನಾಟಕ ರಾಜ್ಯೋತ್ಸವ’ ದ ಕಾರ್ಯಕ್ರಮ ನಿರೂಪಣೆಯ ಅವಕಾಶ ಕಲ್ಪಿಸಿತು. ಮಂಗಳೂರು ಮೂಲದ ರವಿ ಶೆಟ್ಟರು ಅಲ್ಲಿಗೆ ತೆರಳಿ ATS ಎಂಬ ಸಂಸ್ಥೆಯನ್ನು ಸ್ಥಾಪಿಸಿ ತನ್ನೂರಿನ ಹಲವರಿಗೆ ಉದ್ಯೋಗ ಕಲ್ಪಿಸಿ ಅಲ್ಲಿ, ಇಲ್ಲಿ ಎನ್ನುವ ಯಾವುದೇ ಭೇದಭಾವವಿಲ್ಲದೆ  ಶಿಕ್ಷಣ, ಸಂಸ್ಕೃತಿ, ಕ್ರೀಡೆ, ಪರಿಸರ ಹೀಗೆ ಹಲವು ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ಮತ್ತು ಸೇವೆ ಸಲ್ಲಿಸಿದ ಕಾರಣಕ್ಕಾಗಿ ಈ ಬಾರಿ ರಾಜ್ಯ ಸರ್ಕಾರ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. Vijay Prakash, Arjun Janya ಸಂಗೀತ ಕಾರ್ಯಕ್ರಮ ಆಯೋಜಿಸಲು ನಾನವರಿಗೆ ಯಾವುದೇ ಅಪೇಕ್ಷೆಯಿಲ್ಲದೆ ಸಹಕಾರ ನೀಡಿದ್ದೆ. ಇದನ್ನೇ ನೆಪವಾಗಿಟ್ಟುಕೊಂಡು ಆ ಕಾರ್ಯಕ್ರಮಕ್ಕೆ ಆಹ್ವಾನಿಸಿ  ‘ಆರಂಭದ ನಿರೂಪಣೆ ನೀನು ನೆರವೇರಿಸಬೇಕು’ ಎಂದು ಒತ್ತಾಯಿಸಿದ್ದರು. ಮೂರನೇ ಬಾರಿಯ ಕತಾರ್ ಪ್ರಯಾಣ ಜಯಂತ್ ಕಾಯ್ಕಿಣಿ ಸರ್ ಜೊತೆಗೆ ಎನ್ನುವ ಕಾರಣಕ್ಕೆ ಅವಿಸ್ಮರಣೀಯವಾಗಿದೆ! ಅವತ್ತು ಅವರು, ಖ್ಯಾತ ನಿರೂಪಕ  Srujan Lokesh, Challenging Star Darshan ಗೆಸ್ಟ್ಸ್ ಆದರೆ ನಾನು ಹೋಸ್ಟ್. ಈ ಎಲ್ಲಾ ಕಾರಣಗಳಿಗೆ ರವಿ ಶೆಟ್ಟಿ ಮತ್ತಿತರ ಕತಾರ್ ನ ಕನ್ನಡ ಮನಸುಗಳಿಗೆ ನಾನು ಅಭಾರಿ.

Karnataka Rajyotsava Awardee Moodambail Ravi Shetty
Avinash Kamath compering Arjun Janya, Vijay Prakash concert in Qatar

ಕೊರೊನ ದಿನಗಳಲ್ಲಿ ಸಂಕಷ್ಟದ ನಡುವೆಯೂ Qatar ನಲ್ಲಿ ಕನ್ನಡ ಮೊಳಗಿತು. ಪರಿಸ್ಥಿತಿಗನುಗುಣವಾಗಿ Virtual ಕಾರ್ಯಕ್ರಮ ಸಂಯೋಜಿಸಿ ಉಡುಪಿಯಿಂದಲೇ ಒಂದು ತಂಡ ಕಟ್ಟಿಕೊಂಡು ಸುಂದರ ಸಂಗೀತ ಕಾರ್ಯಕ್ರಮ ನಡೆಸಿಕೊಡಲು ಅಲ್ಲಿನ ಮತ್ತೋರ್ವ ಕನ್ನಡ ಪ್ರೇಮಿ, ಸಂಘಟಕರಾದ ದೀಪಕ್ ಶೆಟ್ಟರು ಕರೆ ಮಾಡಿ ಅವಕಾಶ ಕಲ್ಪಿಸಿದರು. ಆ ಕಾರ್ಯಕ್ರಮ ನೆನಪಿಸುವ ಒಂದು ವಿಡಿಯೋ ಇಲ್ಲಿದೆ ನೋಡಿ.

ಈ ನಡುವೆ Bahrain ರಾಷ್ಟ್ರದ ಕನ್ನಡ ಸಂಘದ ಕಾರ್ಯಕ್ರಮ ನಿರೂಪಣೆಗೂ ಅವಕಾಶ ಸಿಕ್ಕಿತು. ಮತ್ತೊಬ್ಬ ಹಿತೈಷಿ Arun Airody ಅವರು ಕತಾರ್ ಕಾರ್ಯಕ್ರಮದ ಯಶಸ್ಸು ಕಂಡು ಬಹರೇನ್ ಗೆ ಆಹ್ವಾನ ನೀಡಿದರು. ಆ ಕಾರ್ಯಕ್ರಮದಲ್ಲಿ Pramod Madhwaraj ( Ex Minister) ಗೆಸ್ಟ್  ನಾನು ಹೋಸ್ಟ್. ಹೀಗೆ ಹೊರರಾಜ್ಯ, ದೇಶದಲ್ಲಿ ನಮ್ಮ ಭಾಷೆ ಕೇಳುವುದೇ ಚಂದ. ಅಲ್ಲಿರುವ ಕನ್ನಡಿಗರ ಅಭಿಮಾನ ಮತ್ತಷ್ಟು ಆಪ್ತ.

Avinash Kamath hosting Kannada Sangha program at Baharain

 

ನಿಜವಾದ ಕನ್ನಡಿಗ ಯಾರು ?

ಜಯಂತ ಕಾಯ್ಕಿಣಿ ( Jayant Kaikini) ಸರ್ ಒಮ್ಮೆ UK ಕನ್ನಡಿಗರ ಆಹ್ವಾನದ ಮೇರೆಗೆ ಅಲ್ಲಿಗೆ ತೆರಳಿದ್ದಾಗ ಒಂದು ಅನೌಪಚಾರಿಕ ಸಂವಾದವನ್ನು ಅವರೊಂದಿಗೆ ಆಯೋಜಿಸಲಾಗಿತ್ತು. ( UK – America, ಯಾವುದು ಅಂತ ಸ್ಪಷ್ಟವಾಗಿ ನೆನಪಿಲ್ಲ) . ಇದರ ವಿಡಿಯೋವನ್ನು Youtubeನಲ್ಲಿ ನೋಡಿದ ನೆನಪು ನನಗೆ. ಆಗವರು ‘ ಹೊಟ್ಟೆಪಾಡಿಗೆ ಅಂತ ಈ ರಾಷ್ಟ್ರಕ್ಕೆ ಬಂದು ಕನ್ನಡಕ್ಕಾಗಿ ಇಷ್ಟೊಂದು ಸಮಯ ಮೀಸಲಿಡುತ್ತೀರಿ. ನಿಮ್ಮ ಚಟುವಟಿಕೆ ಬಹಳ ದೊಡ್ಡದು. ನಿಮ್ಮ ಪ್ರಕಾರ ನಿಜವಾದ ಕನ್ನಡಿಗ ಯಾರು ? ಎನ್ನುವ ಪ್ರಶ್ನೆ ಕೇಳುತ್ತಾರೆ.  ಒಬ್ಬೊಬ್ಬರದ್ದು ಒಂದೊಂದು ಸಮಂಜಸ ಉತ್ತರ ಬರುತ್ತದೆ. ಜಯಂತ ಸರ್ ಹೇಳುತ್ತಾರೆ ‘ ನವೆಂಬರ್ 1 ನೇ ತಾರೀಕಿನಂದು Vidhana Soudha ದ ಎದುರು ಕರ್ನಾಟಕದ ಬಾವುಟ ಹಿಡಿದು ನಿಂತುಕೊಂಡು ಜೈ ಕನ್ನಡಾಂಬೆ ಎಂದರೆ ಅವನು ಕನ್ನಡಿಗನಾಗುವುದಿಲ್ಲ. ಒಬ್ಬ ಒಳ್ಳೆಯ ತಂದೆಯಾಗಿ, ತಾಯಿಯಾಗಿ, ಅಣ್ಣನಾಗಿ,ತಮ್ಮನಾಗಿ, ಗೆಳೆಯನಾಗಿ, ಉದ್ಯೋಗಿಯಾಗಿ ಹೀಗೆ ನಾವು ಮಾಡುವ ಎಲ್ಲಾ ಕೆಲಸಗಳಲ್ಲೂ ಶ್ರದ್ಧೆ, ಪ್ರಾಮಾಣಿಕತೆ ಇದ್ದು ಒಳ್ಳೆಯ ವ್ಯಕ್ತಿಯಾಗಿ ಬಾಳಿ ಬದುಕಿದರೆ ಸಾಕು ಅವನೇ ನಿಜವಾದ ಕನ್ನಡಿಗ’ ಎಂದಿದ್ದರು. ಇದೆಂತಹ ಅದ್ಬುತ ಮಾತಲ್ಲವೇ?

With Jayanth & Smitha Kaikini at Doha International Airport

 

With Arun Airody, Baharain

ನಾವು ನಿಜವಾಗಿಯೂ ಒಳ್ಳೆಯ ಕನ್ನಡಿಗರಾಗಿದ್ದೇವಾ? ಈ ದಿನ ನಮಗೆ ನಾವು ಈ ಪ್ರಶ್ನೆ ಕೇಳೋಣ. ಒಳ್ಳೆಯ ಕನ್ನಡಿಗರಾಗುವ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡೋಣ.

ಇಷ್ಟೆಲ್ಲಾ ಅವಕಾಶ ಕಲ್ಪಿಸಿದ ಪ್ರತಿಯೊಬ್ಬ ಕನ್ನಡಿಗ ಮತ್ತು ಕನ್ನಡಕ್ಕಾಗಿ ನಾನು ಋಣಿ.

ಮನಸು,ಮನೆ ಭಾಷೆ ಕೊಂಕಣಿ ಆದರೆ ಹೃದಯದ ಭಾಷೆ ಕನ್ನಡ.

ಹೀಗೆ ಹೇಳಲು ಹೋದರೆ ಸಾವಿರ ಮಾತಿದೆ…


 

1 COMMENT

  1. U really deserve avinash
    The way u entertain bharain crowd its amazing with ur bunch of knowledge as well spontaneous dialog hope we kannadigas eagrly waiting to see u on stage again and again

LEAVE A REPLY

Please enter your comment!
Please enter your name here