Home Inspiration Gudbud start ಆದದ್ದು ಹೇಗೆ? ಈ ಸ್ವಾರಸ್ಯಕರ ಕತೆ ನಿಮಗೆ ಗೊತ್ತಿತ್ತೇ?

Gudbud start ಆದದ್ದು ಹೇಗೆ? ಈ ಸ್ವಾರಸ್ಯಕರ ಕತೆ ನಿಮಗೆ ಗೊತ್ತಿತ್ತೇ?

2

ಶ್ರೀ ಕೃಷ್ಣ ಮಠ(Udupi Krishna Mutt), ಜಾಮಿಯಾ ಮಸೀದಿ(Jamaiya Masjid), Mother of Sorrows Church, ಹೂಡೆ ಕಡಲ ಕಿನಾರೆ (Hoode Beach), ಮಲ್ಪೆ ಮೀನಿನ ಮಾರ್ಕೆಟ್(Malpe Fish Market), ಮಣಿಪಾಲ ಡಿಸಿ ಆಫೀಸು(Manipal DC Office) ಹೀಗೆ  ‘ಉಡುಪಿ’ ಅಂದಾಕ್ಷಣ ಹತ್ತು ಹಲವು ವಿಚಾರಗಳು ಮನಸಲ್ಲಿ ಹೀಗೆ ಬಂದು ಹಾಗೆ ಹಾದು ಹೋಗುತ್ತವೆ. ಇಲ್ಲಿಯ ತಿಂಡಿ, ತಿನಿಸು, ಆಚಾರ, ವಿಚಾರ, ಹಬ್ಬ, ಆಚರಣೆಗಳು ವಿಭಿನ್ನವಾಗಿದ್ದು, ವಿಶ್ವ ವಿಖ್ಯಾತಿ ಪಡೆದಿರುವುದು ಕೂಡ ನಿಮಗೆ ಗೊತ್ತಿರುವ ಸಂಗತಿಯೇ ಆಗಿದೆ. ಅದರಲ್ಲೂ Udupi Hotelಗಳು ಗೊತ್ತಲ್ಲ – World Famous! ದೇಶ, ವಿಶ್ವದ ಯಾವುದೇ ಮೂಲೆಯಲ್ಲೂ ನೀವು  ‘ಉಡುಪಿ ಹೋಟೆಲ್’ ಕಂಡರೆ ಆಶ್ಚರ್ಯ ಪಡಬೇಕಾಗಿಲ್ಲ.

ತಿಂಗಳ ಹಿಂದೆ ನಾನು ಮಸಾಲಾ ದೋಸಾ ಆರಂಭ (Hotel Woodlands Udupi) ಆಗಿದ್ದು ಹೇಗೆ? ಎಲ್ಲಿಂದ ? ಇತ್ಯಾದಿ ವಿಷಯಗಳನ್ನು ವಿವರವಾಗಿ ಬರೆದಿದ್ದೆ. ಹಲವರು ಸಂಪರ್ಕಿಸಿ ಈ ವಿಷಯ ತಿಳಿಸಿದಕ್ಕಾಗಿ ಅಭಿನಂದಿಸಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದ. ಈ ಲೇಖನದಲ್ಲಿ ವಿಶ್ವ ವಿಖ್ಯಾತಿ ಪಡೆದಿರುವ Gudbud Icecream ಆರಂಭವಾದ ಸ್ವಾರಸ್ಯಕರ ಘಟನೆ ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ. ಓದಿ. ಅದಕ್ಕೂ ಮುಂಚೆ

Hotel Diana ಕುರಿತು ಒಂದಿಷ್ಟು..

ಉಡುಪಿಯ ಪ್ರತಿಯೊಬ್ಬರೂ Hotel Diana ಗೆ ಒಂದಲ್ಲ ಒಂದು ಬಾರಿ ಭೇಟಿ ಕೊಟ್ಟಿರುತ್ತಾರೆ. ‘ ಉಡುಪಿಗೆ ಬಂದ್ರೆ Diana ಗೆ ಹೋಗಬೇಕು ಅಥವಾ Diana ಗೆ ಕರೆದುಕೊಂಡು ಹೋಗಬೇಕು ‘ ಎನ್ನುವ ಷರತ್ತಿನ ಮಾತು ನಾವು ಕೇಳಿದ್ದೇವೆ. Quality, Quantity, Ambience ಕೊಟ್ಟು ಜನರನ್ನು ಸೆಳೆದ Hotelಗಳಲ್ಲಿ ಡಯಾನಾ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ಉಡುಪಿಯ ಹೃದಯ ಭಾಗದಲ್ಲಿರುವ Diana ಸರ್ಕಲ್ ಕೂಡ ಅಷ್ಟೇ ಹೆಸರುವಾಸಿ. ಈ ಹೋಟೆಲ್ ನ ಪಕ್ಕವೇ ಅಲ್ಲೊಂದು ವೃತ್ತವಿದ್ದ ಕಾರಣ ಡಯಾನಾ ಸರ್ಕಲ್ ಎಂದು ಹೆಸರು ಬಂದಿರಬಹುದೆಂದು ನಾನಂದುಕೊಳ್ಳುತ್ತೇನೆ.

Old diana circle picture. 90s Udupi
Old Diana Hotel in the 90s

ಆ ದಿನಗಳಲ್ಲಿ Diana ಗೆ 3 ತಿಂಗಳಿಗೋ  6 ತಿಂಗಳಿಗೋ ಒಮ್ಮೆ ಹೋಗುವುದೆಂದರೆ ನಮಗೆ ಸಂಭ್ರಮ. ನಮ್ಮ ಮನೆಯಲ್ಲಿ Diana ಗೆ  ಹೋಗುವ ಬಗ್ಗೆ ವಾರದ ಹಿಂದೆಯೇ ನಿಘಂಟಾದಾಗ ನಾನು ಈ ಬಾರಿ ಉದ್ದದ ಮೆನು ನಲ್ಲಿ ಯಾವುದನ್ನು ತಿನ್ನಬೇಕು ಎಂದು ನಿರ್ಧರಿಸುತ್ತಿದ್ದೆ. ಅಲ್ಲಿನ ಪ್ರತಿಯೊಂದು ತಿಂಡಿ ತಿನಿಸು ವಿಶೇಷವಾಗಿದ್ದರೂ Puri Kurma, Cutlet, Breadmasala, Gudbud ಕುರಿತು ಹೇಳಲು ಹೋದರೆ ನಿಜಕ್ಕೂ ಸಾವಿರ ಮಾತಿದೆ. Dianaದೊಳಗೆ ಹೊಕ್ಕಾಗ ಅನುಭವಕ್ಕೆ ಬರುವ  ಅಲ್ಲಿನ ಪರಿಮಳ, Aroma ಇನ್ನೂ ಮನದಲ್ಲಿ ಅಚ್ಚಳಿಯದೆ ಹಾಗೇ ಉಳಿದಿದೆ. ಮತ್ತೊಂದು ವಿಶೇಷ ಅಂದ್ರೆ ಮೂರು ನಾಲ್ಕು ದಶಕಗಳಿಂದ serve ಮಾಡುವವರು ಈಗಲೂ ಅಲ್ಲಿದ್ದಾರೆ. ಅವರನ್ನು ಕಂಡಾಗ ನಮ್ಮ ಬಾಲ್ಯ ನೆನಪಾಗಿ ಮನಸ್ಸು ಹಿರಿ ಮಿರಿ ಹಿಗ್ಗುತ್ತದೆ.

Old Diana inside ambience
Old Diana inside ambience

 ಸಂಸ್ಥಾಪಕ Mohandas Pai

1962 ರಲ್ಲಿ Hotel Dianaವನ್ನು ಸ್ಥಾಪಿಸಿದರು. ಆ ದಿನಗಳಲ್ಲಿ ಇವರು ಪ್ರಭಾವಿ ವ್ಯಕ್ತಿಯಾಗಿದ್ದರು. ಉನ್ನತ ಅಧಿಕಾರಿಗಳು, ಸಿನಿಮಾ ತಾರೆಯರು, ಉದ್ಯಮಿಗಳು ಹೀಗೆ ಎಲ್ಲರೊಂದಿಗೂ ಅವರಿಗೆ ಒಡನಾಟ ಇತ್ತು. ಇವರ ಗತ್ತು, ಗೈರತ್ತನ್ನು ನಾನೂ ಹತ್ತಿರದಿಂದ ಕಂಡಿದ್ದೇನೆ. ಬಿಳಿ ಬಣ್ಣದ ಅಂಗಿ ಧರಿಸಿ, ಪಂಚೆ ಉಟ್ಟು, ನಯವಾಗಿ ಬಾಚಿದ ತಲೆ ಕೂದಲು, ಬಲಕೈಗೆ ವಾಚ್ ಕಟ್ಟಿಕೊಂಡು cash counterನಲ್ಲಿ ನಿಂತಾಗ ಅವರ ಗಂಭೀರ ಎನಿಸುವ ಮುಖಚರ್ಯೆ ಇಂದಿಗೂ Diana ಅಭಿಮಾನಿಗಳಿಗೆ ನೆನಪಿರಬಹುದು. ಇನ್ನು ನೇರವಾಗಿ ವಿಷಯಕ್ಕೆ ಬರುತ್ತೇನೆ..

Founder Mohandas Pai, current Managing Director Vittal Pai with  then Mysore King Srikantadatta Wadiyar & family
Founder Mohandas Pai, current Managing Director Vittal Pai with then Mysore King Srikantadatta Wadiyar & family
Infosys founder Mr N R Narayana Murthy, Chairman of Manipal Global Education T V Mohandas Pai,Ramdas Kamath, Executive VP of Infosys
Infosys founder Mr. N R Narayana Murthy, Chairman of Manipal Global Education T V Mohandas Pai, Ramdas Kamath, Executive VP of Infosys

Gudbud Icecream ಆರಂಭವಾಗಿದ್ದು ಹೇಗೆ ?

1965ರಲ್ಲಿ ಪ್ರವಾಸಿಗರ ತಂಡವೊಂದು Diana ಗೆ ಅವಸರದಲ್ಲಿ ಭೇಟಿ ನೀಡಿತ್ತು. ಅವರು icecream ಗೆ ಬೇಡಿಕೆ ಇಟ್ಟರು. ಸ್ಟಾಕ್ ಸೀಮಿತವಾಗಿದ್ದು ಸಮಯವೂ ಕಡಿಮೆ ಇದ್ದ ಕಾರಣ ಪೈ ಅವರು ಗಡಿಬಿಯಲ್ಲಿ ಹಲವು flavourಗಳ icecreamಅನ್ನು ಜೊತೆಗೂಡಿಸಿ ಅದಕ್ಕೊಂದಿಷ್ಟು fruits and nuts ಬೆರೆಸಿ ಪ್ರವಾಸಿಗರಿಗೆ ನೀಡಿದರು. ಇದನ್ನವರು ಇಷ್ಟ ಪಟ್ಟ ಕಾರಣ ಮಾರನೇ ದಿನ ಭೇಟಿ ಕೊಟ್ಟಾಗ ಮತ್ತೊಮ್ಮೆ ಅದೇ icecreamಗೆ ಬೇಡಿಕೆಯಿಟ್ಟರು. ಪೈ ಅವರಿಗೆ ತಾವು ನೀಡಿದ್ದು ಯಾವುದೆಂದು ನೆನಪಿರದ ಕಾರಣ  ‘ನೀವು ನಿನ್ನೆ ಗಡಿಬಿಡಿಯಲ್ಲಿ ನೀಡಿದ icecream ಚೆನ್ನಾಗಿತ್ತು. ಅದನ್ನೇ ನೀಡಿ’ ಎಂದರು.

ಈ ಗಡಿಬಿಡಿ ಮುಂದೆ Gudbud ಆಯಿತು. ಹಾಗಾಗಿ ಈ icecream ಗೆ ನಾಮಕರಣ ಮಾಡಿದ್ದು ಆ ಪ್ರವಾಸಿಗರು. ಆರಂಭವಾಗಿ 57 ವರ್ಷಗಳು ಸಂದಿವೆ !

Hotel Diana Gudbud Icecream
Hotel Diana Gudbud Icecream

ಪೈ ಅವರಿಗೆ ಹೋಟೆಲ್ ಪ್ರಾರಂಭಿಸುವ ಮೊದಲು Ice Cream Parlour ಮತ್ತು Cold Drinks ಆರಂಭಿಸುವ ಯೋಚನೆ ಇತ್ತಂತೆ. ಈ ನಡುವೆ ಮತ್ತೊಂದಿಷ್ಟು ವಿಶೇಷ ಮಾಹಿತಿ ನಿಮ್ಮ ಮುಂದಿಡುತ್ತಿದ್ದೇನೆ, ಕೇಳಿ..

ಇಲ್ಲಿನ ಬಹುಜನರ Hot Favourite List ನಲ್ಲಿರುವ Cutlet ಆರಂಭವಾಗಿದ್ದು 1964ರಲ್ಲಿ. ಆ ದಿನಗಳಲ್ಲಿ cutlet ಕೂಡ ಎಲ್ಲೂ ಲಭ್ಯವಿರುತ್ತಿರಲಿಲ್ಲವಂತೆ! ಇತ್ತೀಚೆಗಿನ ವರ್ಷಗಳಲ್ಲಿ ಬಾಯಲ್ಲಿ ನೀರೂರಿಸುವ Channa Batura, Panneer Mutter, Panneer Butter Masala ಆರಂಭವಾಗಿದ್ದು 1980 ರಲ್ಲಿ.

ಮೊನ್ನೆ ಅಲ್ಲಿಗೆ ಭೇಟಿ ನೀಡಿದಾಗ ವ್ಯವಸ್ಥಾಪಕ ನಿರ್ದೇಶಕರಾದ ವಿಠ್ಠಲ್ ಪೈ ಅವರೊಂದಿಗೆ ಕೂತು ಇಷ್ಟೆಲ್ಲಾ ವಿಷಯ ಸಂಗ್ರಹಿಸಿದೆ. ಅವರಿಗೂ ಸ್ವಲ್ಪ ಬಿಡುವಿತ್ತು. ಹೀಗೆ ಮಾತಿಗೆ ಮಾತು ಬೆಳೆದು ಒಂದೊಮ್ಮೆ 50 ವರ್ಷಗಳ ಹಿಂದಕ್ಕೆ ಹೋಗಿ ಬಂದೆವು. ಅವರು ಮತ್ತು ನನ್ನ ತಂದೆ ಸಹಪಾಠಿಗಳು – ಒಂದೇ class ನಲ್ಲಿ ಕುಳಿತು ಪಾಠ ಕೇಳಿದವರು. ಅವರ ಪುತ್ರ ಕಾಶೀರಾಮ ಮತ್ತು ನಾನು ಪಿಯುಸಿಯಲ್ಲಿ ಒಂದೇ ತರಗತಿಯಲ್ಲಿದ್ದೆವು. ಕಾಲೇಜಿನ ಕೊನೆಯ ದಿನ ಅಲ್ಲೊಂದು ಕಡೆ ಮೂಲೆಯಲ್ಲಿ ಲಕ್ಷ್ಮಿ ಬಾಂಬ್ ಸಿಡಿಸಿದ ಕೀರ್ತಿ ನಮ್ಮಿಬರಿಗೆ ಸಲ್ಲುತ್ತದೆ !!

ದಶಕದ ಹಿಂದೆ Diana ಅನಿವಾರ್ಯ ಕಾರಣಗಳಿಗಾಗಿ ಜಾಗ ಬದಲಿಸಿತು. ಈ ನೂತನ ಕಟ್ಟಡ ಉದ್ಘಾಟನೆಯ ಸಂದರ್ಭ ನಿರೂಪಣೆಯ ಅವಕಾಶ ನನಗೆ ದೊರಕಿ ಅಲ್ಲಿ ನಡೆಯುವ ಹೆಚ್ಚಿನ ಕಾರ್ಯಕ್ರಮಗಳ ಆಯೋಜನೆಯನ್ನೂ ಮಾಡಿದ್ದೇನೆ. ‘ಊರೂರು ತಿರುಗಿದ್ದೇನೆ, ಹಲವು ಕಡೆ Gudbud ತಿಂದಿದ್ದೇನೆ. ಆದರೆ ಇಲ್ಲಿನ ರುಚಿಗೆ ಹೋಲಿಕೆ ಇಲ್ಲ. ಆ ಸ್ವಾದ ಹೇಗೆ ಕಾಪಾಡಿಕೊಂಡು ಬಂದಿದ್ದೀರಿ’ ಎಂದು ಕೇಳಿದಾಗ  ‘ ಅದು ಹೇಳುವುದಿಲ್ಲ, ನನಗೆ ಮತ್ತು ನಿನ್ನ ದೋಸ್ತಿಗೆ ಮಾತ್ರ ಗೊತ್ತು, ಅಷ್ಟೇ. ಆದರೆ 8 ಬಗೆಯ Dry fruits ಬಳಸುತ್ತೇನೆ ‘ ಎಂದು ನಗುತ್ತಲೇ ಹೇಳಿ ನನಗೊಂದು Gudbud ಕೊಡಿಸಿದರು. ಅದರ ಪರಿಣಾಮವೇ ಈ ಬರಹ.

Me compering the inaugural function of newly constructed diana hotel

 

ನಿಮಗೆ ನೆನಪಿರಬಹುದು. ನಮ್ಮ ಶಾಲೆಯ ದಿನಗಳಲ್ಲಿ Tinkle ಪುಸ್ತಕಕ್ಕೆ ಸಾಕಷ್ಟು ಬೇಡಿಕೆ ಇತ್ತು ಯಾಕಂದ್ರೆ ಅದು ಅಷ್ಟೊಂದು ಜನಜನಿತವಾಗಿತ್ತು. ಅಲ್ಲೂ ಒಮ್ಮೆ Dianaದ Gudbud Icecream ಕುರಿತು ಉಲ್ಲೇಖವಾಗಿತ್ತು! ‘ನಾವು ಈ ಮಟ್ಟಕ್ಕೆ ಬೆಳೆಯಲು ಗ್ರಾಹಕರೇ ಕಾರಣ’ ಎಂದು ವಿನಮ್ರವಾಗಿ ವಿಠ್ಠಲ್ ಪೈ ಮಾಂ ಹೇಳಲು ಮರೆಯಲಿಲ್ಲ. ಗಡಿಬಿಡಿಯಲ್ಲಿ Gudbud ಪರಿಚಯಿಸಿದ ಆ ಪ್ರವಾಸಿಗರನ್ನು ನೆನೆಯುತ್ತಾ .. ಅನುಕೂಲವಾದಾಗ ಇನ್ನೊಮ್ಮೆ Diana ಕಡೆ ಹೋಗಿ ಬನ್ನಿ ಎಂದು ನಿಮಗೆ‌ ನೆನಪಿಸುತ್ತಾ.. Gudbud ರುಚಿಯ ಬಗ್ಗೆ ಹೇಳಲು ಹೋದರೆ ಇನ್ನೂ ಸಾವಿರ ಮಾತಿದೆ


 

2 COMMENTS

LEAVE A REPLY

Please enter your comment!
Please enter your name here