Home Badukondu Pathashale ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಹಲವು ವಿಶೇಷತೆಗಳು!

ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಹಲವು ವಿಶೇಷತೆಗಳು!

0

ಕಳೆದೊಂದು ತಿಂಗಳಿನಿಂದ ಸಾಮಾಜಿಕ ಮಾಧ್ಯಮ ತುಂಬಾ ಪ್ರತಿದಿನ ಎಂಬಂತೆ ಸಾಹಿತ್ಯ ಸಮ್ಮೇಳನದ ಕುರಿತು Poters, Videos ಗಮನಿಸುತ್ತಲೇ ಇದ್ದೇನೆ. ಸೃಜನಶೀಲ ಚಟುವಟಿಕೆಗಳು ಮತ್ತು ಪೂರ್ವತಯಾರಿಯೊಂದಿಗೆ 14 ನೇ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ ಎಲ್ಲಾ ಆಯಾಮಗಳಲ್ಲೂ ಜೋರಾಗೆ ಬೆಳಕಿಗೆ ಬಂದಿದೆ. ಕೊರೊನ ಕಾರಣದಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದ ಸಾಹಿತ್ಯಿಕ ಚಟುವಟಿಕೆಗಳು ಈಗ ಮತ್ತೆ ಮೈಕೊಡವಿ ನಿಂತಿದೆ.

ಉಡುಪಿ ಪರಿಸರದಲ್ಲಿ ಜರಗುವ ತಾಲೂಕು ಸಮ್ಮೇಳನವಾದರೂ ಜಿಲ್ಲಾ ಮಟ್ಟದ ಆಯೋಜನೆ, ಹೊಸ ತಂಡದ ನಿಯೋಜನೆ ಮತ್ತು ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನ ಅಂದ್ರೆ ಅಲ್ಲಿ ಒಂದಿಷ್ಟು ಗೋಷ್ಠಿಗಳು, ಒಂದೆರಡು ಹಾಡುಗಳು, ಒಂದಷ್ಟು ಮಾತುಗಳಿಗೆ ಮಾತ್ರ ಸೀಮಿತವಾಗಿದ್ದ ಸಮ್ಮೇಳನ ಈ ಬಾರಿ ಅನುಭವಿ ಸಂಘಟಕ, ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಹೆಚ್. ಪಿ ಅವರ ನೇತೃತ್ವದಲ್ಲಿ ಗೌರವ ಕಾರ್ಯದರ್ಶಿಗಳಾದ ಜನಾರ್ಧನ ಕೊಡವೂರು, ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್ ಸೇರಿದಂತೆ ತಾಲೂಕು ಘಟಕದ ಸದಸ್ಯರು ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾದ ಮಹೇಶ ಠಾಕೂರ್ ಸಹಕಾರದಲ್ಲಿ ವಿಜೃಂಭಣೆ ಮತ್ತು ವಿಶೇಷತೆಗಳಿಂದ ಕೂಡಿದೆ. ಮೊನ್ನೆ ಅನೌಪಚಾರಿಕವಾಗಿ ಮಾತಿಗೆ ಸಿಕ್ಕಾಗ ಅಧ್ಯಕ್ಷರೊಂದಿಗೆ ನಡೆಸಿದ ಕಿರು ಸಂದರ್ಶನದ ಆಯ್ದ ಭಾಗ ಇಲ್ಲಿದೆ.

 

ಈ ಅದ್ಧೂರಿ ಆಯೋಜನೆಯ ಉದ್ದೇಶಗಳೇನು ?

* ಇಲ್ಲಿ ಕನ್ನಡದ ಮನಸುಗಳು ಒಂದಾಗಬೇಕು, ಕನ್ನಡಕ್ಕೆ ಕೊಡುಗೆ ನೀಡಿದ ಹಲವು ಹಿರಿಯರಿದ್ದಾರೆ ಅವರನ್ನು ಗುರುತಿಸಬೇಕು, ಯುವಕರನ್ನು ಕನ್ನಡ ಸಮ್ಮೇಳನದತ್ತ ಆಕರ್ಷಿಸಿ ವಿಭಿನ್ನ ಎನಿಸುವ ಗೋಷ್ಠಿ, ಕಾರ್ಯಕ್ರಮಗಳನ್ನು ಆಯೋಜಿಸಬೇಕು, ನಾಡು – ನುಡಿ – ಸಂಸ್ಕೃತಿಯ ವೈವಿಧ್ಯತೆಯನ್ನು ಪಸರಿಸಬೇಕು ಮತ್ತು ಎಲೆಮರೆ ಕಾಯಿಯಂತಿರುವ ಕೆಲವೊಂದಿಷ್ಟು ಮಂದಿಯನ್ನಾದರೂ ಮುನ್ನೆಲೆಗೆ ತರಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶಗಳಾಗಿವೆ.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲು ಈ ಬಾರಿ ಪರಿಸರವಾದಿಯೊಬ್ಬರನ್ನು ಆಯ್ಕೆ ಮಾಡಿದ್ದೀರಿ. ಇದು ಹಲವರಿಗೆ ಅಚ್ಚರಿ ಮೂಡಿಸಿದೆ. ಇವರ ಆಯ್ಕೆಯ ಹಿಂದಿನ ಕಾರಣವೇನು ?

ಕನ್ನಡ ಎಂದರೆ ಕೇವಲ ಸಾಹಿತ್ಯ ಮಾತ್ರ ಅಲ್ಲ. ಅದು ನಾಡು, ನುಡಿ, ಸಂಸ್ಕೃತಿ, ಸಂಗೀತ, ಕಾಡು ಎಲ್ಲವನ್ನೂ ಒಳಗೊಂಡಿದೆ. ಪರಿಸರ – ನೀರಿನ ಸಂರಕ್ಷಣೆ, ಚಾರಣ, ವನ ಚೇತನ ಎನ್ನುವ ಅತ್ಯಂತ ವಿಶಿಷ್ಟ ಯೋಜನೆಯ ಮೂಲಕ ಕಾಡಿನಲ್ಲಿ ವಾಸ ಇರುವ ಮಕ್ಕಳಿಗೆ ಪಾಠ, ಪಶ್ಚಿಮ ಘಟ್ಟದ ಕುರಿತು ಅಧ್ಯಯನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾವಿದರಾಗಿ ದೇಶವನ್ನು ಪ್ರತಿನಿಧಿಸಿದ ದಿನೇಶ ಹೊಳ್ಳ ಅವರ ಕೊಡುಗೆ ಮತ್ತು ಸಾಧನೆ ಬಹಳ ದೊಡ್ಡದು. ಅವರು Low Profile maintain ಮಾಡುತ್ತಾರೆ. ಅವರದ್ದು Google ಜ್ಞಾನ ಅಲ್ಲ. ಪಶ್ಚಿಮ ಘಟ್ಟದಲ್ಲಿ ಓಡಾಡಿ ಸಂಪಾದಿಸಿದ ನೈಸರ್ಗಿಕ ಜ್ಞಾನ ಭಂಡಾರ. ಸಾಹಿತ್ಯ ಸಮ್ಮೇಳನದಲ್ಲಿ ಪರಿಸರದ ಕುರಿತು ಅವರ ಮಾತುಗಳು ಜನರನ್ನು ಚಿಂತನೆಗೆ ಹಚ್ಚಬೇಕು ಎನ್ನುವ ಕಾರಣದಿಂದ ಆಯ್ಕೆ ಮಾಡಿದ್ದೇವೆ. ಅವರು ಬಂದರೆ ಅರ್ಧ ಪಶ್ಚಿಮ ಘಟ್ಟವೇ ನಮ್ಮಲ್ಲಿಗೆ ಬಂದಂತೆ!!

ಒಂದು ದಿನದ ಸಮ್ಮೇಳನದಲ್ಲಿ ಏನೆಲ್ಲಾ ವಿಶೇಷತೆಗಳಿವೆ ?

* ಗ್ರಹಿಣಿಯರು ಮನೆಯನ್ನು ಸಂಭಾಳಿಸುತ್ತಾರೆ. ಆದರೆ ಅವರಲ್ಲೂ ಹಲವು  ಪ್ರತಿಭೆಗಳಿರುತ್ತವೆ. ಬರವಣಿಗೆಯ ಆಸಕ್ತಿ ಹೊಂದಿರುವ ಗ್ರಹಿಣಿಯರಿಗಾಗಿಯೇ postcard ಕತೆಗಳು ಎನ್ನುವ ಗೋಷ್ಠಿಯನ್ನು ಆಯೋಜಿಸಿದ್ದೇವೆ. ಕತೆ ಒಂದು postcardನ ಒಳಗಿರಬೇಕು. ಆಯ್ಕೆಯಾದ ಕತೆಗಳನ್ನು ಅವತ್ತು ಅವರಿಗೆ ವಾಚಿಸಲು ಅವಕಾಶ ಇದೆ.

* ಹಿರಿಯರಿಗೆ ಈ ಬಾರಿ ಕವಿಗೋಷ್ಠಿಯನ್ನು ಆಯೋಜಿಸಿಲ್ಲ! ವಿದ್ಯಾರ್ಥಿಗಳಿಗೆ ಅಂದ್ರೆ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕವಿಗೋಷ್ಠಿಯನ್ನು ಆಯೋಜಿಸಿದ್ದೇವೆ.

* ನಮ್ಮ ಅಧ್ಯಕ್ಷರಾದ ಶಾಂತರಾಜ್ ಐತಾಳರು ‘ಸುಹಾಸಂ’ ಎನ್ನುವ ಹಾಸ್ಯಪ್ರಿಯರ ಸಂಘಟನೆಯ ಮುಖ್ಯಸ್ಥರು. ಇದನ್ನೇ ಆಧಾರವಾಗಿಟ್ಟುಕೊಂಡು ಹಾಸ್ಯಗೋಷ್ಠಿಯೊಂದನ್ನು ಆಯೋಜಿಸಿದ್ದೇವೆ. ಇಲ್ಲಿ clinic, ಯಕ್ಷಗಾನ, ನಾಟಕಗಳಲ್ಲಿ ಕಂಡುಬಂದ ಹಾಸ್ಯ ಸನ್ನಿವೇಶವನ್ನು ಗಣ್ಯರು ಪ್ರಸ್ತಾಪಿಸುತ್ತಾರೆ. ಇದಕ್ಕೆ ಸಮನ್ವಯಕಾರರಾಗಿ ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈ ಅವರನ್ನು ನಿಯೋಜಿಸಿದ್ದೇವೆ.

* ಶಿವಪಾಡಿ ಮಹಾಲಿಂಗೇಶ್ವರ ದೇವಾಲಯದ  ಸ್ವಚ್ಛ ಸುಂದರ ಪರಿಸರದ ಮಧ್ಯೆ ಇರುವ ಸಭಾಂಗಣದಲ್ಲಿ ಸಮ್ಮೇಳನವನ್ನು ಆಯೋಜಿಸಿದ್ದೇವೆ. ನಗರದಿಂದ ಸ್ವಲ್ಪ ದೂರ ಎನಿಸಿದರೂ ಇಲ್ಲಿ ಪ್ರಶಾಂತತೆ, ನೆಮ್ಮದಿ ನೀಡುವ ವಾತಾವರಣ ಇದೆ.

* ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಯಕ್ಷಗಾನ, ನಾಟಕ, ಭರತನಾಟ್ಯ, ಭಾವಗೀತೆಗಳು ಮತ್ತು ಕನ್ನಡದ ಹೊರತಾಗಿ ಒಡಿಸ್ಸಿ ನೃತ್ಯವನ್ನೂ ಸೇರಿಸಿಕೊಂಡಿದ್ದೇವೆ. ಹೀಗೆ ಈ ಬಾರಿಯ ಸಮ್ಮೇಳನ ಎಲ್ಲದರ ಸಂಗಮವಾಗಿ ಮೂಡಿ ಬರಲಿದೆ.

* ಪರ್ಕಳ ಭಾಗದಲ್ಲಿ ಇದೇ ಮೊದಲ ಬಾರಿಗೆ ಸಮ್ಮೇಳನ ನಡೆಯುತ್ತಿದೆ. ಆ ಭಾಗದಲ್ಲಿ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿದ್ದಾರೆ. ಅದರಲ್ಲಿ 20 ಮಂದಿ ಮತ್ತು 6 ಸಂಘ ಸಂಸ್ಥೆಗಳು ಸೇರಿದಂತೆ ಇತ್ತೀಚೆಗಿನ ವರ್ಷದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಮನೆಮಾತಾದ ಅಜ್ಜ, ಅಜ್ಜಿ ಹೋಟೆಲ್ ನ ಅಜ್ಜ, ಅಜ್ಜಿಯನ್ನು ಅತ್ಯಂತ ವಿಶೇಷವಾಗಿ ಗೌರವಿಸುತ್ತೇವೆ.

* ಉಧ್ಘಾಟನಾ ಸಂದರ್ಭ ತುಳು, ಕನ್ನಡ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ ಹಿರಿಯರಾದ ನಿರ್ದೇಶಕ ಕೃಷ್ಣಪ್ಪ ಉಪ್ಪೂರು, ಮುಂಬೈ ಮಹಾನಗರಿಯಲ್ಲಿ ಮಾಧ್ಯಮ, ರೇಡಿಯೋ ಮತ್ತು ಧ್ವನಿಮುದ್ರಿಕೆ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಸಾಧನೆಗೈದ ಉಡುಪಿ ಮೂಲದ ಮನೋಹರ ನಾಯಕ್, ಉದ್ಯಮ ಕ್ಷೇತ್ರದ ಯಶಸ್ಸಿನ ಜೊತೆಗೆ ಸಮಾಜಸೇವೆಗೂ ಪ್ರಮುಖ ಆದ್ಯತೆ ನೀಡುತ್ತಲಿರುವ ಅಪರೂಪದ ಉದ್ಯಮಿ Girija Group of Concerns ನ ಮುಖ್ಯಸ್ಥರಾದ ರವೀಂದ್ರ ಶೆಟ್ಟಿ ಮತ್ತು 8 ಬಾರಿ ಭಾರತವನ್ನು Athletics ನಲ್ಲಿ ಪ್ರತಿನಿಧಿಸಿರುವ 72 ರ ಅರುಣಕಲಾ ರಾವ್ ಅವರನ್ನು ಗುರುತಿಸುತ್ತಿದ್ದೇವೆ.

ಸರಕಾರದ ಸಹಕಾರ ಇಲ್ಲದ  ಕಾರಣಕ್ಕಾಗಿ ತಾಲೂಕು ಮಟ್ಟದ ಸಮ್ಮೇಳನಗಳು ಈಗ ಜರಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಉಡುಪಿ ಭಾಗದಲ್ಲಿ ಜನರ ಪ್ರೋತ್ಸಾಹದಿಂದಲೇ ಈ ಸಮ್ಮೇಳನ ಆಯೋಜನಯಾಗುತ್ತಿದೆ. ಇಲ್ಲಿ ಯಾವುದೇ Influence, ಹಸ್ತಕ್ಷೇಪ ಇಲ್ಲವೇ ಇಲ್ಲ. ಜನರು ಮತ್ತವರ ದೇಣಿಗೆಯೇ ಎಲ್ಲಾ.

ಡಿಸೆಂಬರ್ 30 ಕ್ಕೆ ಒಂದು ಘಳಿಗೆ ಬರ್ತೀರಲ್ಲ ?

 

 


 

LEAVE A REPLY

Please enter your comment!
Please enter your name here