Home Shorts Planting saplings in memory of Great & Late Haji Abdulla Saheb –...

Planting saplings in memory of Great & Late Haji Abdulla Saheb – Corporation Bank

1

ಉಡುಪಿಯನ್ನು ಕಟ್ಟಿ ಬೆಳೆಸಿದ ಮಹನೀಯರು ಹಲವರು. ಆದ್ರೆ ಮುಂಚೂಣಿಯಲ್ಲಿ ಕಾಣುವವರು ಹಾಜಿ ಅಬ್ದುಲ್ಲಾ ಸಾಹೇಬರು. ಅವರು ಹುಟ್ಟಿದ ದಿನಾಂಕ ನಮಗೆ ತಿಳಿದಿಲ್ಲ. Aug 12, 1935 ರಂದು ಇಹಲೋಕ ತ್ಯಜಿಸಿದರು. ಇಂದಿಗೆ ಅವರು ನಮ್ಮನ್ನಗಲಿ ಸರಿಯಾಗಿ 88 ವರ್ಷ.

ಅವರ ನೆನಪಿಗಾಗಿ ಈ ದಿನ ನನ್ನ ಬಾಲ್ಯ ಸ್ನೇಹಿತ ಮೊಹಮ್ಮದ್ ಆರೀಫ್ ನ ತಮ್ಮ ಮೊಹಮ್ಮದ್ ಆದಿಲ್ ಇತ್ತೀಚಿಗೆ ಮಣಿಪಾಲದಲ್ಲಿ ಮನೆ ನಿರ್ಮಿಸಲು ಖರೀಸಿದ ಜಾಗದಲ್ಲಿ 3 ( ಹಲಸು, ಬಿಳಿ ಜಾಮ್ , ತೆಂಗು )ಗಿಡಗಳನ್ನು ನೆಟ್ಟೆವು.

ವಿಶೇಷ ಅಂದ್ರೆ ಅವರಿಬ್ಬರ ಮಕ್ಕಳಿಂದ ನಾವು ಈ ಈ ಕಾರ್ಯ ಮಾಡಿಸಿದೆವು. ಮಕ್ಕಳಿಂದ ಗಿಡಗಳನ್ನು ನೆಟ್ಟು ಬೆಳೆಸುವುದು ನಮ್ಮ ‘ ನಮ್ಮ ಮನೆ ನಮ್ಮ ಮರ’ ಅಭಿಯಾನದ ಮೂಲ ಉದ್ದೇಶಗಳಲ್ಲೊಂದಾಗಿದೆ.

Aayath,Alina,Ahil ,Ahad,Aizah [Left to Right]

ಆರೀಫ್ ನ ಅಪ್ಪ ಕೃಷಿ ಪ್ರೇಮಿ. ಇವರಿಬ್ಬರೂ ಉದ್ಯೋಗ ನಿಮಿತ್ತ Gulf ಗೆ  ಹೋದ ನಂತರ ಅವರೇ ಇವುಗಳಿಗೆ ನೀರೆರೆದು ಪೋಷಿಸುತ್ತಾರೆ.

* ವಿಶ್ವವಿಖ್ಯಾತ ಕಾರ್ಪೋರೇಶನ್ ಬ್ಯಾಂಕ್ ಸಂಸ್ಥಾಪಕರು ಅವರು.

* ಹಾಜಿ ಅಬ್ದುಲ್ಲಾ ಸಾಹೇಬರು ಸೌಹಾರ್ದದ ಕೊಂಡಿಯಾಗಿ ಬದುಕಿದ್ದರು.

* ಅವರಿಗೂ ಉಡುಪಿ ಶ್ರೀ ಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧ ಇತ್ತು.

* ಅವರ ಮನೆ ಮುಂದೆ ಜನರು ನಡೆದುಕೊಂಡು ಹೋಗುವಾಗ ಚಪ್ಪಲಿಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರಂತೆ. ಅವರಂದ್ರೆ ಊರವರಿಗೆ ಅಷ್ಟೊಂದು ಗೌರವ ಇತ್ತು.

* ದಾನ ಎನ್ನುವ ಪದ ಅವರಿಂದಲೇ ಹುಟ್ಟಿರಬಹುದು ಎಂದು ಹಿರಿಯರೊಬ್ಬರು ನನ್ನಲ್ಲಿ ಹೇಳಿದ ನೆನಪಿದೆ.

ಹೀಗೆ ಅವರ ಕುರಿತು ಬರೆಯುತ್ತಲೇ ಹೋದರೆ ಸಾವಿರ ಸಾವಿರ ಮಾತಿದೆ..

ಈ ಮಕ್ಕಳು, ಆ ಗಿಡಗಳನ್ನು ನೋಡಿ ಹಾಜಿ ಸಾಹೇಬರು ಮುಗುಳ್ನಗೆ ಬೀರಿ ನಮ್ಮನ್ನು ಆಶೀರ್ವದಿಸುತ್ತಾರೆ ಎಂದು ನಂಬುತ್ತೇನೆ.

 

ಅಂದ ಹಾಗೆ ನನ್ನ ಬ್ಲಾಗ್ ಆರಂಭವಾಗಿ ಇಂದಿಗೆ ಒಂದು ವರ್ಷ !

ಮುಂದಿನ ದಿನಗಳಲ್ಲಿ ನಿಮ್ಮಲ್ಲಿ ಹಂಚಿಕೊಳ್ಳಲು ನನ್ನಲ್ಲಿ ನೂರು ವಿಷಯಗಳಿವೆ, ಸಾವಿರ ಮಾತಿದೆ.


1 COMMENT

LEAVE A REPLY

Please enter your comment!
Please enter your name here