ಇವತ್ತು ಹುಣ್ಣಿಮೆ ರಾತ್ರಿ. ಆಫೀಸು ಮುಗಿಸಿ ಹೊರ ಬಂದ ತಕ್ಷಣ ಚಂದ್ರ ಕಣ್ಣಿಗೆ ಬಿದ್ದ. ಜತೆಗಿದ್ದ ಗೆಳೆಯ ಭುವನೇಶ್ ಪೂರ್ಣಚಂದಿರನ ಫೋಟೋ ಕ್ಲಿಕ್ಕಿಸಲು ಮುಂದಾದ..
ತಂಗಾಳಿ ಬೀಸುತಿತ್ತು. ಆತ ಫೋಟೋ ಕ್ಲಿಕ್ಕಿಸಿ ಮುಗಿಸುವಷ್ಟರಲ್ಲಿ ನಮ್ಮ ನೆಚ್ಚಿನ ಕವಿ ಜಯಂತ ಕಾಯ್ಕಿಣಿ ಸರ್ ಸಿನಿಮಾ ಗೀತೆಗಳಲ್ಲಿ ಬಳಸಿದ ‘ಚಂದಿರ’ ನನಗೆ ನೆನಪಾದ.. ತಕ್ಷಣಕ್ಕೆ ನೆನಪಾದ ಕೆಲವು ಸಾಲುಗಳು ನಿಮಗಾಗಿ..
* ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ
* ಬಾಳ ದಾರಿಯಲಿ ಬೇರೆಯದರೂ ಚಂದಿರ ಬರುವನು ನಮ್ಮ ಜತೆ
* ನೀನಿಲ್ಲದೆ ಆ ಚಂದಿರ ಈ ಕಣ್ಣಲಿ ಕಸವಾಗಿದೆ
* ತಂಗಾಳಿ ತಂದಿದೆ ಕರೆಯೋಲೆ ಚಂದಿರನ ದೋಣಿಯು ಕಾಯುತಿದೆ ನಮಗಾಗಿ
* ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ, ಅಲ್ಲೊಂದು ಚೂರು ಇಲ್ಲೊಂದು ಚೂರು ಒಂದಾಗಬೇಕು ಬೇಗ
* ಬಾನಿಗೊಂದು ಬಲೆಯು ಬೇಕು ಆ ಬಲೆಗೆ ಚಂದ್ರ ಬೀಳಬೇಕು
* ಒಂದು ಚಂದ್ರ ಬೇಕು ನಿಂತು ನೋಡಲು
* ಈಗ ಚಂದ್ರನ ಒಪ್ಪಿಗೆ ಬೇಕೇನು ಸಲ್ಲಾಪಕೆ ?
* ಚಂದ್ರ ಬಂದಾಗಿದೆ ಎಲ್ಲಾ ಅಂದಾಗಿದೆ ನೀ ನಡೆದಿರಲು ನನ್ನೊಂದಿಗೆ
* ಮುನಿಸು ಬಂದಾಗೆಲ್ಲ ಅವನೇ ಕ್ಷಮಿಸು ಅನಬೇಕು, ಚಂದಿರನ ತಟ್ಟೆಯಲ್ಲಿ ಜತೆಗೆ ತಿನಬೇಕು
ಈ ಮೇಲಿನ ಸಾಲುಗಳು ಯಾವ ಗೀತೆಗಳದ್ದು ಎಂದು ಒಮ್ಮೆ ಊಹಿಸಿ ನೋಡುವ.. ಸಾಧ್ಯವಾದ್ರೆ ನಿಮಗೆ ನೆನಪಾಗುವ ಜಯಂತ ಕಾಯ್ಕಿಣಿ ಅವರ ಸಿನಿಮಾ ಗೀತೆಗಳಲ್ಲಿ ‘ ಚಂದಿರ’ ಬಂದಿರುವ ಸಾಲುಗಳನ್ನು ಕೆಳಗೆ ಕಾಮೆಂಟ್ ಮಾಡಿ..
ಹೇಳಲು ಹೋದರೆ ಸಾವಿರ ಮಾತಿದೆ…