ಶ್ರೀಕೃಷ್ಣ ಜನ್ಮಾಷ್ಟಮಿ ಸಮೀಪಿಸುತ್ತಿದೆ.ಉಡುಪಿಯಲ್ಲಿ ಅಷ್ಟಮಿ ಅಂದ್ರೆ ವಿಶೇಷ ಸಂಭ್ರಮ, ಗೌಜಿ. ಹಬ್ಬ ಮತ್ತಷ್ಟು ಕಳೆಗಟ್ಟುವಂತೆ ಮಾಡುವುದು ಹುಲಿವೇಷ. ಈ ವರ್ಷ ಎಂದಿಗಿಂತ ಸ್ವಲ್ಪ ಹೆಚ್ಚು ಹುಲಿ ತಂಡಗಳು ಜನರನ್ನು ರಂಜಿಸಲಿವೆ ಎನಿಸುತ್ತಿದೆ. ಕಳೆದ 10 ದಿನಗಲ್ಲಿ ಅಲ್ಲಲ್ಲಿ ಹಲವು flexಗಳು ನನ್ನ ಕಣ್ಣಿಗೆ ಬಿದ್ದವು. ಗೆಳೆಯ ಶಶಾಂಕ್ ರಾವ್ ಹೇಳುವ ಪ್ರಕಾರ ಅವರ ಊರು ಅಂದ್ರೆ ಡಯಾನಾ, ಕುಕ್ಕಿಕಟ್ಟೆ, ಅಲೆವೂರು, ರಾಂಪುರ ಭಾಗದ 2.5 ಕಿ ಮೀ ವ್ಯಾಪ್ತಿಯಲ್ಲಿ 5 ಹುಲಿವೇಷ ತಂಡಗಳಿವೆಯಂತೆ.
ಇಷ್ಟೇ ಅಲ್ಲ, ಈ ಬಾರಿ ಹಲವು ಕಡೆಗಳಲ್ಲಿ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಗೆದ್ದವರಿಗೆ ದೊಡ್ಡ ಮೊತ್ತದ ಇನಾಮು ಇದೆ ! ಭಾಗವಹಿಸಿದವರಿಗೆ ಗೌರವ ಧನವಿದೆ. ಶಿರೂರು ಸ್ವಾಮೀಜಿಗಳ ನೆನಪಲ್ಲಿ ಹುಲಿವೇಷ ತಂಡಗಳ ಕುಣಿತವನ್ನು ರಥಬೀದಿಯ ಉತ್ಸವ ಗುತ್ತಿನ ವೇದಿಕೆಯಲ್ಲಿ ಕಾಣಬಹುದು. ನನಗೆ ಕಂಡ ಮತ್ತು whatsapp ಮೂಲಕ ಬಂದ ಹುಲಿವೇಷ ಸ್ಪರ್ಧೆಗಳು ಮತ್ತು ತಂಡಗಳ ಮಾಹಿತಿ ಇರುವ photoಗಳು ಇಲ್ಲಿವೆ. ಅಷ್ಟಮಿಗೆ ಉಡುಪಿಗೆ ಬನ್ನಿ …