Home Travel Hotel Donimane – ರುಚಿಕರ ಮೀನಿನ ಖಾದ್ಯಗಳ ಖಜಾನೆ

Hotel Donimane – ರುಚಿಕರ ಮೀನಿನ ಖಾದ್ಯಗಳ ಖಜಾನೆ

0

ಬಾಳೆ ಎಲೆ ಮೀನು ಊಟದ ರುಚಿಯ ಕುರಿತು ಎಷ್ಟು ಬರೆದರೂ, ಹೇಗೆ ಬರೆದರೂ ಕಡಿಮೇನೆ.

ಅದೇ ಮೀನು, ಅದೇ ಬಾಳೆ ಎಲೆ ಆದರೆ ಪ್ರತಿ ಹೋಟೆಲ್ ನಲ್ಲೂ ರುಚಿ ಮಾತ್ರ ಬೇರೆ !

ಹಿಂದಿನ ಲೇಖನದಲ್ಲಿ ನೀವು ಓದಿದ್ದು ನೆನಪಿರಬಹುದು. ಊರಲ್ಲಿ ಯಾವುದೇ ಹೊಸ ಹೋಟೆಲ್ ತೆರೆದರೂ ಅಲ್ಲಿಗೊಮ್ಮೆ ಭೇಟಿ ಕೊಟ್ಟು ನನಗೆ ಇಷ್ಟ ಆಗಲಿ, ಆಗದೆ ಇರಲಿ ಅದರ ಮಾಲೀಕರಿಗೆ ಅಭಿನಂದನೆ ಹೇಳಿ ಪ್ರೋತ್ಸಾಹದ ಒಂದೆರಡು ಮಾತು ಹೇಳಿ ಬರುವುದು ನನಗೆ ಒಂದು ವಾಡಿಕೆಯಾಗಿಬಿಟ್ಟಿದೆ.

ಇತ್ತೀಚೆಗೆ ನಾನು ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುವಾಗ ಸಂತೆಕಟ್ಟೆ ಜುಂಕ್ಷನ್ ಗೂ 200 ಮೀಟರ್ ಹಿಂದೆ ಎಡ ಭಾಗದಲ್ಲಿ ( ಆಕರ್ಷಕ Robosoft ಕಟ್ಟಡದ ವಿರುದ್ಧ ದಿಕ್ಕಿನಲ್ಲಿ ) ಕಾಣ ಸಿಕ್ಕಿದ್ದು ‘ ದೋಣಿ ಮನೆ ‘ ಎನ್ನುವ ಮಾಂಸಾಹಾರಿ ಹೋಟೆಲ್.

Donimane fish hotel udupi

ಮೀನು ಹೊರತುಪಡಿಸಿ Non Veg ಪ್ರಿಯರಿಗೆ ಎಲ್ಲಾ ಬಗೆಯ ಖಾದ್ಯಗಳು ಲಭ್ಯವಿರುವ ಈ ಹೋಟೆಲ್ ನಲ್ಲಿ ಮೊನ್ನೆ ಸಕತ್ ಆಗಿರುವ ಊಟ  ಮಾಡಿದೆ.

ಅಷ್ಟರಲ್ಲೇ ಅಲ್ಲಿಗೆ ಬಂದ ಹೋಟೆಲ್ ಮಾಲಕ ಅಮರದೀಪ್ ಆಚೆ ಈಚೆ ಒಂದೆರಡು ಬಾರಿ ಕಂಡು ನಕ್ಕು ನಂತರ ಮಾತಿಗೆ ಇಳಿದರು. ಸ್ನೇಹ ಸಂಪಾದನೆಗೆ ಒಂಚೂರು grip, comfort level ಸಿಕ್ಕರೆ ಸಾಕು. ಒಂದೆರಡು ಮಾತಾಡಿ ಹೊಸ ಗೆಳೆತನ ಸಂಪಾದಿಸುತ್ತೇನೆ. ಅವರು ಹೋಟೆಲ್ ಕಟ್ಟಿದ ಬಗೆ ವಿವರಿಸಿದರು. ಈ ಹಿಂದೆ ಅವರು ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಅಧ್ಯಾಪಕರಾಗಿದ್ದರಂತೆ. ಯಾವುದೊ ಒಂದು ಘಟನೆಯಿಂದ ಮನಸ್ಸಿಗೆ ಬೇಸರವಾಗಿ ಉದ್ಯಮಕ್ಕೆ ಬಂದರಂತೆ. ಇದು ಅವರ Dream Project ಅಂತೆ.

Donimane fish hotel
Ample parking space

ಹೀಗಿದೆ ನೋಡಿ ದೋಣಿಮನೆಯ Highlights..

*  Palm Oil  ಕ್ಯಾನ್ಸರ್ ಕಾರಕ, Cancer ಅಂಶ ಹೆಚ್ಚಿದೆ ಎಂದು ಕೇಳಿ ತಿಳಿದಿರುವ ಕಾರಣ Palm Oil ಬಳಸುವುದಿಲ್ಲ.

* ಹೆಚ್ಚಿನ ಖಾದ್ಯಗಳಿಗೆ ತೆಂಗಿನ ಎಣ್ಣೆ ಬಳಸುತ್ತಾರೆ . ಪ್ರತಿ ದಿನ ಎಣ್ಣೆ ಬದಲಾಯಿಸುತ್ತಾರೆ.

* Chicken Kabab ತಯಾರಿಸಲು Sunflower Oil ಬಳಸುತ್ತಾರೆ.

* Trolley System ನಿಜಕ್ಕೂ ಹೊಸತು ಅಂತನಿಸಿತು. ಈ ರೀತಿ ನೀವು ದೇವಸ್ಥಾನಗಳಲ್ಲಿ  ಕಂಡಿರಬಹುದು. 12 ಗಂಟೆಗೆ ಅನ್ನ, ಸಾರು, ಪಲ್ಯ, ಚಟ್ನಿ ತುಂಬಿಸಿಟ್ಟರೆ ಮಧ್ಯಾಹ್ನ 3.30 ರವರೆಗೂ ಅದು ಬಿಸಿಯಾಗಿಯೇ ಉಳಿಯುತ್ತದೆ

The trolley system which are rarely seen in hotels like this

* Cold Pressed ತೆಂಗಿನ ಎಣ್ಣೆ, Nandini Panneer, ನಂದಿನಿ ತುಪ್ಪವನ್ನೇ ಬಳಸುತ್ತಾರಂತೆ.

* ಎಲ್ಲಾ ಮಸಾಲೆ ಖಾದ್ಯಗಳಿಗೆ ಹೊರಗಿನ ಮಸಾಲಾ ಬಳಸದೆ ಇಲ್ಲಿನ ಬಾಣಸಿಗರೇ ತಯಾರಿಸಿದ ಯಾರಿಗೂ ಹೇಳಲಾಗದ ಮಸಾಲೆ ಬಳಸುತ್ತಾರಂತೆ.

ಇಷ್ಟು ಮಾತಾಗುವಾಗ ನನ್ನ ಊಟ ಮುಗಿಯಿತು. ಇಷ್ಟೆಲ್ಲಾ ವಿಶೇಷತೆಗಳನ್ನು  ಒಂದು ಪುಟ್ಟ ಹೋಟೆಲ್ ನೀಡುತ್ತಿದೆ ಎಂದರೆ ಮೀನು, ಕೋಳಿ ಊಟ ಪ್ರಿಯರಿಗೆ ಈ ಬಗ್ಗೆ ತಿಳಿಸಲೇ ಬೇಕು ಎಂದು ಹೊರಡುವಾಗಲೇ ನಿರ್ಧರಿಸಿದ್ದೆ.

 

ನನಗೆ ಇದೆಲ್ಲಕ್ಕಿಂತ ಹೆಚ್ಚಾಗಿ ಅಮರ್ ಕುರಿತು ಇಷ್ಟವಾದ ಮತ್ತೊಂದು ಸಂಗತಿ ಎಂದರೆ ಅವರು ಸಾಮಾಜಿಕ ಚಟುವಟಿಕೆಳ ಕುರಿತು, ಒಂದೆರಡು ಯೋಜನೆಗಳ ಕುರಿತು ವಿವರಣೆ ನೀಡಿದರು. ಇಂಥವರಿಗೆ ಜನರು ಪ್ರೋತ್ಸಾಹ ಕೊಟ್ಟರೆ ಮತ್ತೊಂದಿಷ್ಟು ಹೊಸತನಕ್ಕೆ ನಾಂದಿ ಹಾಡಬಹುದು ಅಂತನಿಸಿತು.

ಸಮಯ ಮಾಡಿಕೊಂಡು ಒಮ್ಮೆ ಖಂಡಿತ  ಭೇಟಿ ನೀಡಿ..


LEAVE A REPLY

Please enter your comment!
Please enter your name here