ಅನನ್ಯ ತಾಳ್ಮೆಯನ್ನೇ ಮೈಗೂಡಿಸಿಕೊಂಡಿರುವ ಜಯರಾಮ ಶೆಟ್ಟಿ ಎಂಬ ಅಪರೂಪದ ವ್ಯಕ್ತಿಯನ್ನು ಕತಾರ್ ರಾಷ್ಟ್ರದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ನನ್ನ ಹಿತೈಷಿಗಳಾದ ರವಿ ಶೆಟ್ಟರು ತಮಗೆ whatsapp ಮೂಲಕ ಬಂದಂತಹ ವಿಡಿಯೋ ಮೂಲಕ 11 ವರ್ಷಗಳ ಹಿಂದೆ ನನಗೆ ಪರಿಚಯಿಸುತ್ತಾರೆ. ನಂತ್ರ ಇವರನ್ನು ಭೇಟಿಯಾಗುವ ಹಂಬಲದಿಂದ ಕುಂದಾಪುರ ತಾಲೂಕಿನ Kandluru ಎಂಬ ಅವರೂರಿಗೆ ತಲುಪುತ್ತೇನೆ.
‘ಇಂಥವರೂ ನಮ್ಮ ನಡುವಿದ್ದಾರೆಯೇ’ ಎನ್ನುವ ಪ್ರಶ್ನೆಯ ಜೊತೆಗೆ ಜಯರಾಮ ಶೆಟ್ಟರ ಜೊತೆ ಸ್ನೇಹ ಬೆಳೆಸುತ್ತೇನೆ. ಅವರು ನನಗೆ ಪ್ರಾಯಶಃ ಬದುಕಿಗೆ ಬೇಕಾದ ಒಂದು ಪ್ರಮುಖ ಪಾಠವನ್ನು ಕಲಿಸುತ್ತಾರೆ. ಅದೇನು ?
ಈ ವಿಡಿಯೋ ನೋಡಿ ಸಾಧ್ಯ ಆದ್ರೆ ಶೆಟ್ಟರಿಗೊಂದು ಕರೆ ಮಾಡಿ ಮಾತನಾಡಿ. – 99459 44893
-ಅವಿನಾಶ್ ಕಾಮತ್