Home Badukondu Pathashale ಬದುಕೊಂದು ಪಾಠಶಾಲೆ | Video -1

ಬದುಕೊಂದು ಪಾಠಶಾಲೆ | Video -1

0

ನಾನು ಸಾರ್ವಜನಿಕ ಬದುಕಿಗೆ ಬಂದು 20 ವರ್ಷಗಳು ಕಳೆದವು. ವೈಯಕ್ತಿಕ ಆಸಕ್ತಿ, ಉದ್ಯೋಗದ ನಿಮಿತ್ತ ನನಗೆ ಹಲವಾರು ಜನರನ್ನು ಭೇಟಿಯಾಗುವ ಅವಕಾಶಗಳು ದೊರೆತಿವೆ. ಜನರು ನನ್ನ ಕೇಂದ್ರಬಿಂದುವಾಗಿರುವುದರಿಂದ ಅವರಲ್ಲೇ ವಿಶೇಷತೆಗಳನ್ನು ಹುಡುಕುವ ಪ್ರಯತದಲ್ಲಿರುತ್ತೇನೆ.

ಈ 20 ವರ್ಷಗಳಲ್ಲಿ ನಾನು ಕಂಡ ವಿಶೇಷ ವ್ಯಕ್ತಿಗಳು, ಸನ್ನಿವೇಶಗಳು ಸೇರಿದಂತೆ ಹಲವು ಸಂಗತಿಗಳಿಂದ ಬದುಕಿಗೆ ಬೇಕಾದ ಪಾಠಗಳನ್ನು ಕಲಿತಿದ್ದೇನೆ, ಕಲಿಯುತ್ತಲೇ ಇದ್ದೇನೆ.
ಇದೆಲ್ಲವನ್ನು ಸಣ್ಣ ವಿಡಿಯೋಗಳ ರೂಪದಲ್ಲಿ ಭಟ್ಟಿ ಇಳಿಸಿದರೆ ಹೇಗಿರುತ್ತೆ ಅಂದುಕೊಂಡೆ. ‘ ಚೆನ್ನಾಗೇ ಇರುತ್ತೆ ‘ ಅಂತ ಉತ್ತರ ಬಂತು. ವಾರಕ್ಕೆ ಒಂದು ಅಥವಾ ಎರಡರಂತೆ ಕತೆಗಳನ್ನು ಹೇಳುತ್ತಲೇ ಹೋಗುತ್ತೇನೆ. ಸಮಯ ಸಿಕ್ಕಾಗ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

-ಅವಿನಾಶ್ ಕಾಮತ್