Home Inspiration ಸ್ಪುರದ್ರೂಪಿ ಯುವಕನೊಬ್ಬನ ಬಹುಕೋಟಿ ಉದ್ಯಮ : ಯಶಸ್ಸಿನ ಘಮ !

ಸ್ಪುರದ್ರೂಪಿ ಯುವಕನೊಬ್ಬನ ಬಹುಕೋಟಿ ಉದ್ಯಮ : ಯಶಸ್ಸಿನ ಘಮ !

0

ನಾನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯವರು ಒಂದು ಸೋಪ್ ತಯಾರಿಸುವ ಘಟಕವೊಂದರ ಶೂಟಿಂಗ್ ಇದೆ, ಕಾಪು ಪರಿಸರದಲ್ಲಿ ಎಂದಾಗ ನಮ್ಮೂರಲ್ಲಿ ಇಂಥದ್ದೊಂದು ಇರಲಿಕ್ಕಿಲ್ಲ, ಏನೋ ತಪ್ಪಿ ಊರ ಹೆಸರು ಹೇಳಿದ್ದಾರೆ ಎಂದು ಮನಸಲ್ಲೇ ಅಂದುಕೊಂಡಿದ್ದೆ.

ಚಿತ್ರೀಕರಣದ ದಿನ ಬಂದೇ ಬಿಡ್ತು. ನನ್ನ ಜೊತೆ ಬಂದಿದ್ದ ಉನ್ನತ ಅಧಿಕಾರಿಗಳು ಸಂಸ್ಥೆಯ ನಿರ್ದೇಶಕರೊಂದಿಗೆ ಮಾತನಾಡಲು ಅವರ Cabin ಗೆ ತೆರಳಿದಾಗ ನಾನಿನ್ನೂ ಚಿತ್ರೀಕರಣಕ್ಕೆ ಹೊರಗಡೆ ತಯಾರಿ ನಡೆಸುತ್ತಿದ್ದೆ. ಕ್ಯಾಮೆರಾ ಎತ್ತಿಕೊಂಡು ಒಳಗಡೆ ಹೊಕ್ಕಾಗ ದಿಗ್ಬ್ರಾಂತನಾದೆ ! ಆಕರ್ಷಕ Cabinನಲ್ಲಿ ನಿರ್ದೇಶಕರ ಆಸನದಲ್ಲಿ ನಾನು ಕಂಡಿದ್ದು ಯಾವುದೇ ಸಿನಿಮಾ ನಟರಿಗೂ ಕಡಿಮೆಯಿಲ್ಲದ ಸ್ಪುರದ್ರೂಪಿ ಯುವಕನೊಬ್ಬನನ್ನು!!

Mr. Kirsten Farias

ಅವರೊಂದಿಗೆ 20 ನಿಮಿಷ ಸಹಜ ಕುತೂಹಲದಿಂದ ಮಾತಿಗಿಳಿದೆ. ಎಲ್ಲಾ ಮಾಹಿತಿ ಪಡೆದು ಸುಮಾರು 2 ಗಂಟೆಗಳ ಕಾಲ ಚಿತ್ರೀಕರಣ ನಡೆಸಿದೆವು. ಒಂದು ಹೊಸ ಪ್ರಪಂಚವನ್ನೇ ಕಂಡೆ! ಮನಸೊಂದಿದ್ದರೆ ಏನನ್ನೂ ಸಾಧಿಸಬಹುದೆಂದು ಮತ್ತೊಮ್ಮೆ ಅಕ್ಷರಶಃ ಮನಗಂಡೆ!

ನಾವು Soap, Toothpaste ಬಳಸದ ದಿನಗಳೇ ಇಲ್ಲ ಅಲ್ವಾ ? ಆದ್ರೆ ಇವುಗಳನ್ನು ಹೇಗೆ ತಯಾರಿಸುತ್ತಾರೆ ಅಂತ ನಾವು ಯಾವತ್ತಾದ್ರೂ ಯೋಚನೆ ಮಾಡಿದ್ದೇವಾ? ಇಲ್ಲ ಅಲ್ವಾ ?

ಅದೊಂದು ಕುತೂಹಲಕಾರಿ ಪ್ರಕ್ರಿಯೆ. ನಾನದನ್ನು ಇಲ್ಲಿ ಸೂಕ್ಷ್ಮವಾಗಿ ವಿವರಿಸುವುದು ಕಷ್ಟ. ಆದ್ರೆ ಇಲ್ಲಿಗೊಮ್ಮೆ ಭೇಟಿ ನೀಡಿ ಅವಕಾಶ ಸಿಕ್ಕರೆ ನೀವು ಗಮನಿಸಿ.

ಇಲ್ಲಿ Calcybryte  ಹೆಸರಿನ Toothpaste  ಮತ್ತು LUVMARK ಹೆಸರಿನ ಸೋಪ್ ತಯಾರಿಸುತ್ತಾರೆ. Luvmark ಸೋಪ್ ಸದ್ಯ ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಗಳಿಸುತ್ತಿದೆ. ರಾಜ್ಯ ಮತ್ತು ಹೊರರಾಜ್ಯದಲ್ಲೂ ಈ ಸೋಪ್ ಗೆ ಈಗ ಬಹು ಬೇಡಿಕೆಯಿದೆ. ನಾವು ಚಿತ್ರೀಕರಣ ಮಾಡುತ್ತಿದ್ದ ದಿನವೇ ಸಾವಿರಗಟ್ಟಲೆ soap ಅಲ್ಲಿ ತಯಾರಾಗುತ್ತಿತ್ತು. ವಿಶೇಷ ಅಂದ್ರೆ packing ಹೊರತುಪಡಿಸಿ ಇನ್ನುಳಿದ ಎಲ್ಲಾ ಪ್ರಕ್ರಿಯೆಗಳು ಯಂತ್ರಗಳ ಮೂಲಕವೇ ಸಾಗುತ್ತದೆ. ಹೆಚ್ಚು ಕಡಿಮೆ ಒಂದು ವರ್ಷದ ಹಿಂದಷ್ಟೇ ಕಾಪು, ಬೆಳಪುವಿನ ಪರಿಸರದಲ್ಲಿ ನಗರದ ಹೊರವಲಯದಲ್ಲಿ ಸ್ಥಾಪಿತವಾದ ಈ ಕಾರ್ಖಾನೆಯಿಂದ ಆ ಪುಟ್ಟ ಊರಿನ ಹಲವರಿಗೆ ಖಾಯಂ ಉದ್ಯೋಗ ದೊರೆತಂತಾಗಿದೆ. ಇದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.

Soap Packaging ಪ್ರಕ್ರಿಯೆ

  • Kirsten Farias ಈ ಸಂಸ್ಥೆಯ ಆಡಳಿತ ನಿರ್ದೇಶಕರು ( MD). 23 – 28 ರ ಆಸುಪಾಸಿನ ಈ ಯುವಕ ಈ ಬ್ರಹತ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎನ್ನುವುದು ಮತ್ತೊಂದು ಆಶ್ಚರ್ಯ !!
  • ಉದ್ಯಮ ಸುಲಭ ಸಾಧನೆಯಲ್ಲ. ಅಲ್ಲಿ ಧೈರ್ಯ, ಸ್ಥೈರ್ಯ, ಜ್ಞಾನ, ಅನುಭವ ಎಲ್ಲವೂ ಬೇಕು. ಸಣ್ಣ ವಯಸ್ಸಿಗೆ ಇದೆಲ್ಲವನ್ನು ಗಳಿಸಿರುವ Kirsten ಗೆ ಉಜ್ವಲ ಭವಿಷ್ಯ ಇದೆ.

  • ಕೇಂದ್ರ ಸರ್ಕಾರದ Vocal for Local ಕಲ್ಪನೆಯಡಿ ಸ್ಥಾಪಿಸಿರುವ ಈ ಸಂಸ್ಥೆಯಲ್ಲಿ ಊರಿನ ಆಸುಪಾಸಿನ ಅರ್ಹರಿಗೆ ಉತ್ತಮ ವೇತನದ ಉದ್ಯೋಗ ದೊರೆತಿದೆ.

  • ಅವರ ತಂದೆ ಬಹುದೊಡ್ಡ ಉದ್ಯಮಿಯಂತೆ. ಪ್ರಾಯಶಃ ಅವರಿಂದಲೇ ಬಳುವಳಿಯಾಗಿ ಉದ್ಯಮದ ಚಾಕಚಕ್ಯತೆ ಇವರಿಗೂ ಬಂದಿರಬಹುದು. ಅಪ್ಪ ಉದ್ಯಮಿಯಾದರೆ ಮಗನೂ ಉದ್ಯಮಿಯಾಗಬೇಕೆಂದೇನಿಲ್ಲ. ಅಂಥದ್ರಲ್ಲಿ ಇದು ಮತ್ತೊಂದು ವಿಶೇಷ. ಈ ವ್ಯಕ್ತಿ ಮನಸು ಮಾಡಿದರೆ Model, Cinema ಅಥವಾ ಕಿರುತೆರೆ ನಟನಾಗಿ ಭವಿಷ್ಯ ರೂಪಿಸಿಕೊಳ್ಳಲೂಬಹುದಾಗಿತ್ತು.

  • ಮಾರುಕಟ್ಟೆಯಲ್ಲಿ ಕಡ್ಲೆ ಹಿಟ್ಟಿನ ಸೋಪುಗಳನ್ನು ನಾವು ನೋಡಿದ್ದೇವೆ, ಬಳಸಿದ್ದೇವೆ. ಕಡ್ಲೆಹಿಟ್ಟಿನ ಜೊತೆಗೆ Scrub ಮಿಶ್ರಿತ ಸೋಪು ಇವರ ತಯಾರಿಕೆಯಾಗಿದೆ. ಅದೇ ಕಾರಣಕ್ಕೆ ಸೋಪ್ ಗೆ ಕಡಿಮೆ ಅವಧಿಯಲ್ಲಿ ಬಹುಬೇಡಿಕೆ ಬಂದಿದೆ ಎನ್ನುತ್ತಾರೆ.
ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಪಡೆದಿರುವ Luvmark ಕಡ್ಲೆಹಿಟ್ಟಿನ ಸೋಪು.

 

ಏನೇ ಆಗಲಿ ಬಹುಕೋಟಿ ಉದ್ಯಮ, ಇಷ್ಟೊಂದು ಬ್ರಹತ್ ಸಂಸ್ಥೆ ನಡೆಸಲು ಗುಂಡಿಗೆ ಬೇಕು. ಇಂತಹ ಯುವಕರನ್ನು ನಾವು ಪ್ರೋತ್ಸಾಹಿಸಬೇಕು. ಹೇಗಿದ್ದರೂ ಪ್ರತಿದಿನ ಸೋಪ್ ಬಳಸುತ್ತೇವೆ. ಈ ಲೇಖನ ಓದಿದ ನಂತ್ರ ಒಮ್ಮೆ Luvmark ಸೋಪ್ ಬಳಸಿ. ಇಷ್ಟ ಆದಲ್ಲಿ ಇತರರಿಗೂ ತಿಳಿಸಿ. ಅಂದ ಹಾಗೆ ಸೋಪ್ ತಯಾರಿಕಾ ಘಟಕವೊಂದು  ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವುದು ಇದೇ ಮೊದಲು! Kirsten Farias ಗೆ ಶುಭಾಶಯ ಹೇಳಿ ಮುಂದೆ ಯಶಸ್ವೀ ಉದ್ಯಮಿಯಾಗಿ ಹೊರಹೊಮ್ಮಿ ಎನ್ನುವ  ಹಾರೈಕೆಗಳೊಂದಿಗೆ … All the best

The outer look of the factory.

LEAVE A REPLY

Please enter your comment!
Please enter your name here