Home Thoughts ಸೊಗಸಾದ ನಿರೂಪಣೆಯ ಒಳಗೂ, ಹೊರಗೂ !

ಸೊಗಸಾದ ನಿರೂಪಣೆಯ ಒಳಗೂ, ಹೊರಗೂ !

0

ಭಾಗ – 2
ಕಾರ್ಯಕ್ರಮ ನಿರೂಪಣೆ ಕುರಿತ ಮತ್ತಷ್ಟು ವಿಷಯಗಳು.. ನನ್ನ ಅನುಭವದ ಬುತ್ತಿಯಿಂದ..

*ಏರು ಧ್ವನಿಯಲ್ಲಿ ಕೂಗಾಟ, ಚೀರಾಟ ಎಂದಿಗೂ ಆಭಾಸವೆನಿಸುತ್ತದೆ . ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ಜೋರಾಗಿ ಮಾತನಾಡಬೇಕಾದ ಪ್ರಸಂಗ ಬರಬಹುದು. ಆದರೆ ಕಾರ್ಯಕ್ರಮದುದ್ದಕ್ಕೂ ಕೂಗಾಟ, ಅಬ್ಬರಗಳು ಉತ್ತಮ ನಿರೂಪಣೆ ಎನಿಸಿಕೊಳ್ಳಲು ಸಾಧ್ಯವಿಲ್ಲ.

*ವೇದಿಕೆ ಕಾರ್ಯಕ್ರಮಗಳಲ್ಲಿ ಯಶಸ್ಸು ಕಂಡ ನಿರೂಪಕ ಟಿವಿ ಕಾರ್ಯಕ್ರಮಗಳಲ್ಲಿ ಗೆಲ್ಲಲು ಸಾಧ್ಯವಾಗದಿರಬಹುದು. ಏಕೆಂದರೆ ಅವೆರಡು ಬೇರೆಯದೇ ಪ್ರಕಾರಗಳು. ಬಳಸುವ ಭಾಷೆ, ಪ್ರಸ್ತುತಿ, ಶೈಲಿ ಎಲ್ಲವೂ ಬೇರೆಯದೇ ಆಗಿರುತ್ತದೆ. ವೇದಿಕೆ ಕಾರ್ಯಕ್ರಮಗಳ ನಿರೂಪಕ ಇನ್ನಷ್ಟು ಹೆಚ್ಚು ಪ್ರಜ್ಞಾವಂತನಾಗಿರಬೇಕಾಗುತ್ತದೆ. ಹಾಗೆಯೇ ಯಶಸ್ವೀ Radio Jockey ಆಗಲು ಬೇರೆಯದೇ ಕೌಶಲ್ಯಗಳನ್ನು ಕರಗತಗೊಳಿಸಿಕೊಂಡಿರಬೇಕಾಗುತ್ತದೆ.
Body Language

*ಕಾರ್ಯಕ್ರಮದುದ್ದಕ್ಕೂ ನಿರೂಪಕನ ಮುಖದಲ್ಲಿ ನಗುವಿರಬೇಕು.

*ವೇದಿಕೆಯ ಮೇಲೆ ಆತ್ಮವಿಶ್ವಾಸದಿಂದ ನಡೆದುಕೊಳ್ಳಬೇಕು. ನಡಿಗೆ Brisk Walking ನಂತಿರಬೇಕು. ಕೂತಂತೆ ನಿಂತಿರಬಾರದು. ಇಡೀ ವೇದಿಕೆಯನ್ನು ಆತ ಗ್ರಹಿಸಿ ಅದರ ಘನತೆಯನ್ನು ಹೆಚ್ಚಿಸಬೇಕು.

*ವೇದಿಕೆಗೆ ಗಣ್ಯರನ್ನು, ಅತಿಥಿಗಳನ್ನು ಆಹ್ವಾನಿಸುವ ಸಂದರ್ಭ ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಅವರ ಹೆಸರು ಉಲ್ಲೇಖಿಸುವಾಗ ಗಣ್ಯರಿಗೆ ನಮ್ಮ ಸ್ವರದ ಏರಿಳಿತದಲ್ಲಿ ಅವರ ಉಪಸ್ಥಿತಿಯ ಮಹತ್ವ ತಿಳಿಯುವಂತಾಗಬೇಕು.

*ಹೊಗಳುವಿಕೆ ಕೂಡ ಒಂದು ಕಲೆ. It’s an art as well as skill. ಯಾರನ್ನೂ ಅತಿಯಾಗಿ ಹೊಗಳಬಾರದು. ಅತಿಯಾದ ಹೊಗಳುವಿಕೆ ವ್ಯಕ್ತಿ ಸೇರಿದಂತೆ ಸಭಿಕರಿಗೆ ಮುಜುಗರವುಂಟುಮಾಡಬಹುದು. ಎಷ್ಟು ಬೇಕೋ ಅಷ್ಟೇ ಹೇಳುವುದು ಮಾತ್ರವಲ್ಲ ಅವರನ್ನು ಅತ್ಯಂತ ವಿಶೇಷವಾಗಿ ವಿಭಿನ್ನ ರೀತಿಯಲ್ಲಿ ಜನರಿಗೆ ಪರಿಚಯಿಸಬೇಕು.

*ಎಂದಿಗೂ ಸಭಿಕರಿಗೆ ಬೆನ್ನು ಹಾಕಿ ನಿಲ್ಲಲೇಬಾರದು.

*ಒಬ್ಬ ನಿರೂಪಕ ವೇದಿಕೆಯಲ್ಲಿ ಕಾಲ ಮೇಲೆ ಕಾಲು ಹಾಕಿ ಕೂರಬಾರದು.

*ಬಹು ಮುಖ್ಯವಾದ ಮತ್ತೊಂದು ಸಂಗತಿ ಏನೆಂದರೆ Gap Fillingನ ನೈಪುಣ್ಯತೆ ಇರಬೇಕು. ಗಡಿಬಿಡಿಯಾದಲ್ಲಿ, ಕಾರ್ಯಕ್ರಮದ flow ಗೆ ತೊಂದರೆಯಾದ ಸಂದರ್ಭ ಆ ಸನ್ನಿವೇಶವನ್ನು ನಿಭಾಯಿಸವ ಕೌಶಲ್ಯ ಗೊತ್ತಿರಬೇಕು. ಈ ರೀತಿ ಆಗದಂತೆ ಕಾರ್ಯಕ್ರಮದ ಮೊದಲೇ ಎಲ್ಲವೂ ಸರಿಯಾಗಿದೆಯೇ ಎಂದು ನೋಡಿಕೊಳ್ಳುವುದು ನಿರೂಪಕನ ಜವಾಬ್ದಾರಿಯಾಗಿದೆ.

*ಯಾರೊಬ್ಬರ ಭಾಷಣ ಸಪ್ಪೆಯೆನಿಸಿದಾಗ ಅದನ್ನು ತನ್ನ ಮಾತಿನ ಶೈಲಿಯ ಮೂಲಕ ಸರಿದೂಗಿಸಬೇಕು.

*Emotions Balance ಮಾಡುವುದು ಗೊತ್ತಿರಬೇಕು. ಆತನೊಳಗಿನ ಭಾವನೆ ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗಾಗಿ ಭಾವನೆಗಳ ಮೇಲೆ ಹಿಡಿತ ಬಹು ಮುಖ್ಯವಾದದ್ದು.

*ಕಾರ್ಯಕ್ರಮ ಯಾವುದೇ ಪ್ರಕಾರದ್ದಾಗಿರಲಿ, ನಿರೂಪಕ ಬಳಸುವ ಭಾಷೆ ಆತನ ಒಟ್ಟು ವ್ಯಕ್ತಿತ್ವವನ್ನು ತೋರಿಸುತ್ತದೆ. ಭಾಷೆ ಶುದ್ಧವಾಗುವುದು ನಿರಂತರ ಮಾತನಾಡುವುದರಿಂದ, ಅನುಭವದಿಂದ ಮತ್ತು ಓದಿನಿಂದ. ಪ್ರತಿನಿತ್ಯದ ಬದುಕಿನಲ್ಲಿ ನಾವು ಸಾಮಾನ್ಯವಾಗಿ ಇತರರನ್ನು ಗೆಲ್ಲುವುದು ನಮ್ಮ ಮಾತಿನ ಶೈಲಿ ಮತ್ತು ಭಾಷೆಯಿಂದ. ನಿರೂಪಕನಾದವನು ಅತ್ಯುತ್ತಮ ಭಾಷಾಶೈಲಿಯನ್ನು ಮೈಗೂಡಿಸಿಕೊಂಡಿರಬೇಕು. ಸಂದರ್ಭಕ್ಕೆ ತಕ್ಕಂತೆ ಮೃದುವಾದ ಮಧುರವಾದ ಮಾತು ನವಿರಾದ ನಿರೂಪಣೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

*ಉಪಸ್ಥಿತರಿರುವ ಸಭಿಕರ ಮನಸ್ಥಿತಿಯನ್ನು ನಿರೂಪಕ ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ ನಮಗೆ ಅವರ Mind Set ಅರ್ಥವಾಗುವುದಿಲ್ಲ. ಆದರೂ ತಮಾಷೆ, ನಗು, ಸಣ್ಣ ಪುಟ್ಟ ಕತೆಗಳು, ಸಂದರ್ಭೋಚಿತ ಮಾತುಗಳಿಂದ ಕಾರ್ಯಕ್ರಮವು ಸರಾಗವಾಗಿ ಮುನ್ನಡೆಯುವಂತೆ ನೋಡಿಕೊಳ್ಳಬೇಕು.

*ಕೆಲವು ಕಾರ್ಯಕ್ರಮಗಳ ಮೇಲೆ ಅತಿಯಾದ ನಿರೀಕ್ಷೆ ಇಟ್ಟುಕೊಂಡು ಹೋಗಿರುತ್ತೇವೆ. ಆದರೆ ನಮ್ಮ ನಿರೀಕ್ಷೆಯ ಮಟ್ಟ ತಲುಪಿರುವುದಿಲ್ಲ. ಈ ಸಂಗತಿಯನ್ನು ನಿಭಾಯಿಸುವುದು ಕೂಡ ಬಹು ಮುಖ್ಯ. ( ಈ ಅನುಭವ ನನಗೆ ಹಲವು ಬಾರಿ ಆಗಿದೆ. ಇದನ್ನು ಉದಾಹರಣೆ ಸಹಿತ ಇನ್ನೊಂದು ಲೇಖನದಲ್ಲಿ ತೆರೆದಿಡುತ್ತೇನೆ )

*ವಿಷಯ ಜ್ಞಾನ – Subject Knowledge is very important

*Wittiness, Spontaneity ಜೊತೆಗೆ ಅಲ್ಲಿ ನಡೆಯುವ ಸಣ್ಣ ಸಣ್ಣ ವಿಷಯಗಳನ್ನು ಗಮನಿಸುತ್ತಲೇ carry ಮಾಡಬೇಕು.

*ಕಾರ್ಯಕ್ರಮವನ್ನು ಥಟ್ಟನೆ ನಿಲ್ಲಿಸಿಬಿಡಬಾರದು. As in there should not be an abrupt ending. ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಬಂದಷ್ಟೇ ಸುಂದರವಾಗಿ ಅದನ್ನು ಸಂಪನ್ನಗೊಳಿಸಬೇಕು.

*ಕಾರ್ಯಕ್ರಮದ ಹಿಂದೆ ದುಡಿದ ತಂತ್ರಜ್ಞರು, ಯಶಸ್ಸಿಗೆ ಪ್ರತ್ಯಕ್ಷ ಪರೋಕ್ಷವಾಗಿ ಕಾರಣೀಕರ್ತರಾದ ಪ್ರತಿಯೊಬ್ಬರನ್ನು ಒಂದಲ್ಲ ಒಂದು ರೀತಿಯಲ್ಲಿ ಉಲ್ಲೇಖಿಸಬೇಕು. ವೇದಿಕೆಯ ಮೇಲೆ ಕಾಣಿಸಿಕೊಳ್ಳದ ಅವರ ಕೆಲಸ ಎಷ್ಟು ಮುಖ್ಯ ಎಂಬುದನ್ನು ಸಭಿಕರ ಗಮನಕ್ಕೆ ತರುತ್ತಲೇ ನೇಪಥ್ಯದಲ್ಲಿ ದುಡಿದ ಪ್ರತಿಯೊಬ್ಬರಿಗೂ ನಮ್ಮ ಮಾತಿನಿಂದ ಸಾರ್ಥಕ ಭಾವ ಮೂಡುವಂತೆ ಮಾಡಬೇಕು.

*Consciousness ಜಾಸ್ತಿ ಇದ್ದವನಿಗೆ ಮಾತ್ರ ನಿರೂಪಣೆ ಮಾಡಲು ಸಾಧ್ಯ. ಕಾರ್ಯಕ್ರಮದುದ್ದಕ್ಕೂ ಆತ Alert ಆಗಿಯೇ ಇರಬೇಕು.

ಒಬ್ಬ Singer, Dancer, Photographer, Choreographer ಹೇಗೆ Professional ಎನಿಸಿಕೊಳ್ಳುತ್ತಾನೋ ಹಾಗೆ ಒಬ್ಬ ನಿರೂಪಕ ಕೂಡ. ಅವರೆಲ್ಲರಂತೆ ಮಹತ್ವ ಆತನಿಗೂ ಇರಬೇಕು. ವೇದಿಕೆ, ಧ್ವನಿವರ್ಧಕ, ಡೆಕೋರೇಷನ್ ಎಷ್ಟೇ ಸುಂದರವಾಗಿ ಸಜ್ಜುಗೊಳಿಸಿದ್ದರೂ ಇಡೀ ಕಾರ್ಯಕ್ರಮವನ್ನು ಯಶಸ್ಸಿನ ಪಥದಲ್ಲಿ ಕೊಂಡೊಯ್ಯುವುದು ನಿರೂಪಕನ ಜವಾಬ್ದಾರಿಯಾಗಿದೆ.

ನಿಮಗೆ Chance ಅವಿನಾಶ್ ಅವ್ರೆ. ಮಾತಾಡಿದಕ್ಕೆ ಹಣ ಕೊಡ್ತಾರೆ. ಅದೂ ಕೇಳಿದಷ್ಟು ಅಂತ ಹಲವರು ನನ್ನಲ್ಲಿ ಹೇಳಿದ್ದಾರೆ. ಅವರಿಗೆಲ್ಲಾ ಉತ್ತರ ನೀಡಲು ನಾನು ಇದೆಲ್ಲವನ್ನು ಬರೆದುಕೊಂಡಿಲ್ಲ. ನನಗೆಷ್ಟು ತಿಳಿದಿದೆ, ಕಲಿಯಲು ಇನ್ನೆಷ್ಟಿದೆ ಅಂತ ನನಗೆ ನಾನೆ ಪ್ರಶ್ನಿಸಲು ಮತ್ತು ನನ್ನನ್ನು ಇಷ್ಟ ಪಟ್ಟ, ಪಡದ ಹಲವಿರಿಗೆ ನಿರೂಪಣೆಯ ಒಳ ಹೊರಗು ತಿಳಿಯಲಿ ಎನ್ನುವ ಉದ್ದೇಶದಿಂದ ಬರೆದಿದ್ದೇನೆ. ಮುಂದೆ ನಿರೂಪಕನಾಗಬೇಕು ಎಂದು ಬಯಸುವ Juniors ಗೆ ಸ್ವಲ್ಪ ಮಟ್ಟಿಗೆ ಸಹಾಯವಾದರೂ ನನ್ನೀ ಬರವಣಿಗೆ ಸಾರ್ಥಕ ಎಂದು ಭಾವಿಸುತ್ತೇನೆ. ತೆರೆದಷ್ಟೂ ಬಾಗಿಲು ಹರಿದಷ್ಟೂ ಬೆಳಕು
ಮುಂದಿನ ಲೇಖನದಲ್ಲಿ ಮತ್ತಷ್ಟು ವಿಷಯಗಳು .. ಕಾಯ್ತಾ ಇರಿ.. ಸದ್ಯದಲ್ಲೇ..

 


 

LEAVE A REPLY

Please enter your comment!
Please enter your name here