Home Shorts 90 ದಿನಗಳ ಹಬ್ಬವೊಂದನ್ನು ಆಚರಿಸಿದ್ದೇನೆ ! ಚುನಾವಣೆಯ ನನ್ನ ಕತೆ ನಿಮ್ಮ ಜೊತೆ

90 ದಿನಗಳ ಹಬ್ಬವೊಂದನ್ನು ಆಚರಿಸಿದ್ದೇನೆ ! ಚುನಾವಣೆಯ ನನ್ನ ಕತೆ ನಿಮ್ಮ ಜೊತೆ

0

ಹೌದು.. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಅಂದ್ರೆ ಹಬ್ಬ. ಈ ಹಬ್ಬವನ್ನು ದೇಶದ ಪ್ರತಿಯೊಬ್ಬ ನಾಗರಿಕ ಸಂಭ್ರಮದಿಂದ ಆಚರಿಸಬೇಕು. ಮತದಾನವನ್ನು ಹೆಮ್ಮೆಯಿಂದ ಮಾಡಬೇಕು. ನಾನಿದನ್ನು ನನ್ನದೇ ರೀತಿಯಲ್ಲಿ ಮಾಡಿದ್ದೇನೆ ಎನ್ನುವ ತೃಪ್ತಿ ನನಗಿದೆ. ಹೇಗೆ ಗೊತ್ತಾ ?

ಫೆ 16 ರಿಂದ ಆರಂಭವಾದ ಚುನಾವಣಾ ಸಂಬಂಧಿ ಕೆಲಸ ಕಾರ್ಯಗಳು ನನಗೆ ವಿಶೇಷ ಅನುಭವ ನೀಡಿವೆ. ಇದು ನನ್ನ ವೃತ್ತಿ ಬದುಕಿನಲ್ಲಿ ಬಹುದೊಡ್ಡ ಮೈಲಿಗಲ್ಲುಗಳಲ್ಲಿ ಒಂದು ಎಂದೇ ಭಾವಿಸುತ್ತೇನೆ. 2013, 2014, 2018 ರ ನಂತರ ಬೇರೊಂದು ಆಯಾಮದಲ್ಲಿ ರಾಜಕಾರಣಿಗಳನ್ನು ಹತ್ತಿರದಿಂದ ಅರ್ಥೈಸಿಕೊಳ್ಳುವ ಅಪೂರ್ವ ಅವಕಾಶ ನನಗೆ ಸಿಗಬಹುದು ಎಂದು ನಾನು ಊಹಿಸಿರಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಸಿಗದ ಕೆಲವು ಅವಕಾಶಗಳು ಪ್ರಯತ್ನ ಪಡದೆ ಸಿಕ್ಕಾಗ ಇನ್ನು ಮುಂದೆ ಯಾವುದಕ್ಕೂ ಪ್ರಯತ್ನ ಪಡದೆ ಇರುವುದು ಒಳ್ಳೆಯದು ಎಂದು ಅನಿಸಿದ್ದು ಸುಳ್ಳಲ್ಲ. ಏನೇ ಇರಲಿ, ಕಳೆದ 3 ತಿಂಗಳ ನನ್ನ ಕೆಲಸಗಳ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿ ಇದೆ.

*ರಾಜ್ಯದ ಕೈಗಾರಿಕಾ ಮಂತ್ರಿ ಮುರುಗೇಶ್ ನಿರಾಣಿ – ಅವರ ಅಭಿವೃದ್ಧಿ ಕೆಲಸಗಳ ಕುರಿತು ಸ್ಕ್ರಿಪ್ಟ್, ಹಿನ್ನೆಲೆ ಧ್ವನಿ

*ರಾಜ್ಯದ ಕೃಷಿ ಮಂತ್ರಿ ಬಿ. ಸಿ. ಪಾಟೀಲ್ – ಅವರ ಅಭಿವೃದ್ಧಿ ಕೆಲಸಗಳ ಕುರಿತು ಸ್ಕ್ರಿಪ್ಟ್, ಹಿನ್ನೆಲೆ ಧ್ವನಿ

*ಹೊಳಲ್ಕೆರೆ ಶಾಸಕರಾದ ಚಂದ್ರಪ್ಪ – ಅವರ ಅಭಿವೃದ್ಧಿ ಕೆಲಸಗಳ ಕುರಿತು ಸ್ಕ್ರಿಪ್ಟ್, ಹಿನ್ನೆಲೆ ಧ್ವನಿ

*ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿಯವರ ಕುರಿತ ಪ್ರಮುಖ Script ಗಳಿಗೆ ಹಿನ್ನೆಲೆ ಧ್ವನಿ

*ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರ ಕೆಲಸಗಳ ಕುರಿತ ಸ್ಕ್ರಿಪ್ಟ್, ಕಂಟೆಂಟ್, ಹಿನ್ನೆಲೆ ಧ್ವನಿ , ಸಾಮಾಜಿಕ ಜಾಲತಾಣ ಇತ್ಯಾದಿ.

ರಾಜ್ಯದ ಪ್ರಮುಖ Digital Channelಗಳಲ್ಲಿ ಮುಂಚೂಣಿಯಲ್ಲಿ ಕಾಣಸಿಗುವ ವಾರ್ತಾ ಭಾರತಿ ಯ ‘ಚುನಾವಣಾ ವಿಶೇಷ’ ಎನ್ನುವ ಶೀರ್ಷಿಕೆಯಲ್ಲಿ ಸರಣಿ ಸಂದರ್ಶನಗಳನ್ನು ನಡೆಸಿದೆ.
ಇಷ್ಟೇ ಅಲ್ಲದೆ ರಾಜ್ಯದ ಕೆಲವು ಪ್ರಮುಖ ಅಭ್ಯರ್ಥಿಗಳ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟು ಸಂದರ್ಭಕ್ಕೆ ತಕ್ಕಂತೆ Content ಗಳನ್ನು ರೂಪಿಸುವುದು ಒಂದು ಸವಾಲೇ ಆಗಿತ್ತು.
ಕನಿಷ್ಠ ಅಂದ್ರು 200 Voice Overs, Script ಗಳನ್ನು ತಯಾರಿಸಿ ಪ್ರಸ್ತುತಪಡಿಸಿರುವುದು ನನಗೆ ಹೊಸ ಹುರುಪು ನೀಡಿದೆ. ಈ ಎಲ್ಲಾ ಕೆಲಸಗಳ ಒತ್ತಡ ಮತ್ತು ಸವಾಲುಗಳ ನಡುವೆ ದಿನಗಳು ಕಳೆದದ್ದು ಗೊತ್ತೇ ಆಗಲಿಲ್ಲ !

ನನ್ನ ಕೆಲಸಗಳ ಮೇಲೆ ನಂಬಿಕೆ ಇಟ್ಟು ಅವಕಾಶ ಕಲ್ಪಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ದಿನದ 15 ಗಂಟೆಗೆಳ ಕೆಲಸಗಳಿಂದಾಗಿ ನನಗೆ ಹಲವರೊಂದಿಗೆ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗಿಲ್ಲ. ಅವರೆಲ್ಲರನ್ನು ನಾಳೆ ಮತ ಚಲಾಯಿಸಿದ ನಂತರ ಸಂಪರ್ಕಿಸುವುದು ನಾನು ಮಾಡುವ ಮೊದಲ ಕೆಲಸವಾಗಿದೆ.

 


 

LEAVE A REPLY

Please enter your comment!
Please enter your name here