ಗುರುರಾಜ ಗಂಟಿಹೊಳೆ ( BJP )

ಬಾಲ್ಯದಲ್ಲೇ RSS ಕಡೆ ಆಕರ್ಷಿತರಾದವರು. ಒಂದು ದಶಕಕ್ಕೂ ಮಿಕ್ಕಿ ಮಂಗಳೂರು, ಸುಳ್ಯ, ಪುತ್ತೂರು ಮತ್ತಿತರ ಭಾಗಗಳಲ್ಲಿ ಪ್ರಚಾರಕರಾಗಿ ಸೇವೆ ಸಲ್ಲಿಸಿ RSSಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಇಷ್ಟೇ ಅಲ್ಲ ತಾವು ಮಾಡಿದ ಸಮಾಜ ಸೇವೆಯ ಕುರಿತು ಎಲ್ಲೂ ಹೇಳಿಕೊಳ್ಳದ ಇವರು ನೊಂದವರ, ಬಡವರ, ಶೋಷಿತರ ಪಾಲಿನ ಆಶಾಕಿರಣ ಎಂದು ಅವರನ್ನು ಹತ್ತಿರದಿಂದ ಬಲ್ಲವರು ವ್ಯಾಖ್ಯಾನಿಸುತ್ತಾರೆ.

ಗೋಪಾಲ ಪೂಜಾರಿ ( Congress )

ಇವರೊಬ್ಬ ಯಶಸ್ವೀ ಹೋಟೆಲ್ ಉದ್ಯಮಿ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರಿಂದ ಪ್ರೇರೇಪಣೆ ಪಡೆದು ರಾಜಕೀಯ ಪ್ರವೇಶಿಸಿದರು. 4 ಬಾರಿ ಗೆದ್ದು 2 ಬಾರಿ ಸೋತು ಇದೀಗ 7 ನೇ ಬಾರಿ ಚುನಾವಣಾ ಅಖಾಡದಲ್ಲಿದ್ದಾರೆ. ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಇವರೊಬ್ಬ ಅತ್ಯಂತ ಜನಪ್ರಿಯ ಕಾಂಗ್ರೆಸ್ ನಾಯಕರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕ. ರಾ. ರ. ಸಾ. ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಪೂಜಾರಿಯವರು ಸರಳ, ಸ್ನೇಹಜೀವಿ ಮತ್ತು ಉತ್ತಮ ಆಡಳಿತಗಾರರಾಗಿದ್ದಾರೆ.