ಗುರ್ಮೆ ಸುರೇಶ್ ಶೆಟ್ಟಿ (BJP) – ಮೂಲತಃ ಕಾಪು ತಾಲೂಕಿನ ಗುರ್ಮೆಯವರು. ಬಳ್ಳಾರಿಯಲ್ಲಿ ಯಶಸ್ವೀ ಉದ್ಯಮಿ. ಅತ್ಯಂತ ಸರಳ ಜೀವಿ ಎಂದು ಇವರ ಸಂಪರ್ಕ ಹೊಂದಿರುವ ಪ್ರತಿಯೊಬ್ಬರೂ ಇವರಿಗೆ ನೀಡುವ ಬಿರುದಾಗಿದೆ. ಜಾತಿ, ಸಮುದಾಯ ಯಾವುದನ್ನೂ ಲೆಕ್ಕಿಸದೆ ಸಹಾಯ ಅರಸಿ ಬರುವ ಎಲ್ಲರಿಗೂ ಸತ್ಯಾಸತ್ಯತೆ ಅರಿತು ಬೇಷರತ್ ಸಹಾಯ ಚಾಚುವ ಕೊಡುಗೈದಾನಿ. ತಾನು ಸ್ಥಾಪಿಸಿರುವ ಗುರ್ಮೆ ಟ್ರಸ್ಟ್ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಮತ್ತು ಸಹಾಯ ನೀಡುತ್ತಲೇ ಬಂದಿದ್ದಾರೆ. ಸಂಧರ್ಬೋಚಿತವಾಗಿ ಸಾಹಿತ್ಯ, ಕತೆ, ಕವನ, ಗಾದೆ ಮಾತುಗಳ ಮೂಲಕ ತಮ್ಮ ಭಾಷಣವನ್ನು ರಸವತ್ತಾಗಿ ಪ್ರಸ್ತುತಪಡಿಸುವ ಇವರ ಮಾತುಗಾರಿಕೆ ಎಲ್ಲರೂ ಮೆಚ್ಚುವಂಥದ್ದಾಗಿದೆ.
ವಿನಯ ಕುಮಾರ್ ಸೊರಕೆ (Congress) – ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ತಮ್ಮ 29 ನೇ ವಯಸ್ಸಿಗೆ NSUI ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದವರು. 1 ಬಾರಿ ಕರ್ನಾಟಕ ಸರಕಾರದಲ್ಲಿ ನಗರಾಭಿವೃದ್ಧಿ ಮಂತ್ರಿಗಳಾಗಿ, ಪುತ್ತೂರಿನಲ್ಲಿ 2 ಬಾರಿ ಕಾಪುವಿನಲ್ಲಿ 1 ಬಾರಿ ಶಾಸಕರಾಗಿ, ಉಡುಪಿ ಲೋಕಸಭಾ ಕ್ಷೇತ್ರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಪುವನ್ನು ತಾಲೂಕಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ರಾಜಕೀಯ, ಸರಕಾರದ ಮಟ್ಟದಲ್ಲಿನ ಆಡಳಿತಾತ್ಮಕ ವಿಚಾರಗಳ ಕುರಿತು ಅಪಾರ ಜ್ಞಾನ ಹೊಂದಿದ್ದಾರೆ. ಮಿತಭಾಬಾಷಿ, ಸ್ನೇಹಜೀವಿಯಾಗಿರುವ ಇವರು ಕಳೆದ ಬಾರಿ ಚುನಾವಣೆಯಲ್ಲಿ ಸೋತರೂ ಜನರ ಜೊತೆಗಿನ ಬಾಂಧವ್ಯ ಹಾಗೆಯೇ ಇದೆ ಎನ್ನುವುದು ಕೇಳಿ ಬರುತ್ತಿರುವ ಮಾತು.
vinaya kumar Sorake ki jai
Jai vinay Kumar sorake … we need experience candidate to take our constituency forward….