Home Shorts 6 ನೇ’ ಅಭಿಮತ ಸಂಭ್ರಮ ‘ ಗೆದ್ದಿತು!! ನಾನು?

6 ನೇ’ ಅಭಿಮತ ಸಂಭ್ರಮ ‘ ಗೆದ್ದಿತು!! ನಾನು?

1

ಮೂರು ವರ್ಷಗಳ ನಂತರ ಮೊನ್ನೆ ಮತ್ತೆ ‘ಅಭಿಮತ ಸಂಭ್ರಮ’ ದ ಭವ್ಯ ವೇದಿಕೆ ಏರುವ ಅಪೂರ್ವ ಅವಕಾಶ ದೊರಕಿತು. ನಮ್ಮ ಅವಳಿ ಜಿಲ್ಲೆಗಳಲ್ಲಿ, ಒಂದು ಪುಟ್ಟ ಹಳ್ಳಿಯಲ್ಲಿ ಜರಗುವ, Corporate ಸ್ಪರ್ಶ ಹೊಂದಿರುವ, ಬೆರಳೆಣಿಕೆಯ ಅದ್ದೂರಿ, ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ಇದೂ ಒಂದು. ಆ ಕಾರಣಕ್ಕೆ ಇದು ನನಗೊದಗಿದ ಅದ್ಭುತ ಅವಕಾಶ.

ಕಳೆದೈದು ವರ್ಷಗಳಲ್ಲಿ Team Abhimata ಮತ್ತಷ್ಟು ಬಲಿಷ್ಠವಾಗಿ ಬೆಳೆದಿದೆ ಎನ್ನುವುದು ಮೊನ್ನೆ ಈ ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ ಸಾಬೀತು ಪಡಿಸಿತ್ತು. ಸಂಭ್ರಮದ ಹಿಂದಿನ ಪರಿಶ್ರಮ ಕಾರ್ಯಕ್ರಮದುದ್ದಕ್ಕೂ ಭಾಸವಾಗುತಿತ್ತು.ಅದ್ಬುತ ಎನಿಸುವ Posters, ಮನಸೆಳೆಯುವ Brouchers – Invitation, ಅಚ್ಚುಕಟ್ಟಿನ ನಿರ್ವಹಣೆ, ಪ್ರತಿ ಸಂಗತಿಯಲ್ಲೂ ಸೃಜನಶೀಲತೆ, ಗೆಳೆಯರ ಬೇಷರತ್ ಸಹಕಾರ ಹಾಗೂ Team Work ನ ಮಹತ್ವ ಸಾರುವ ಈ ಅಭಿಮತ ಸಂಭ್ರಮದ ಬಗ್ಗೆ ಹೇಳಹೊರಟರೆ ಸಾವಿರ ಮಾತಿದೆ..

Around 5000 people witnessed Abhimata Sambhrama 2023

ಸಾಮಾನ್ಯವಾಗಿ ಯಾವುದೇ ವೇದಿಕೆ ಏರುವ ಮುನ್ನ ನನಗೆ Anxiety ಇದ್ದೇ ಇರುತ್ತದೆ. ಇದು ನನ್ನ ಮಟ್ಟಿಗೆ ಸಹಜ. ಹಾಗಿದ್ದಾಗ ಮಾತ್ರ ಹೊಸ ಪ್ರಸ್ತುತಿ ಸಾಧ್ಯವಾಗುತ್ತದೆ ಎನ್ನುವುದು ಪ್ರತಿ ಬಾರಿ ನನ್ನ ಅನುಭವಕ್ಕೆ ಬಂದಿದೆ. ಮೊನ್ನೆ ಕಾರ್ಯಕ್ರಮ ಆರಂಭವಾಗುವ ಒಂದಿಪ್ಪತ್ತು ನಿಮಿಷಕ್ಕೂ ಮುನ್ನ ಉದಯ ಶೆಟ್ಟರು Back stage ನಲ್ಲಿ “ಅವಿನಾಶ್, ಇದು ನಮ್ಮ Dream Project – ನಿಮ್ಮ ಕೈಗೆ ಇಡುತ್ತಿದ್ದೇವೆ” ಎಂದಾಗ ಆತಂಕ ಸ್ವಲ್ಪ ಹೆಚ್ಚೇ ಆಗಿತ್ತು!

Prominent personalities onstage- Abhimata 2023

ಕೋಟ, ಕುಂದಾಪುರ ಭಾಗದ ಹೆಚ್ಚಿನ ಸಾಂಸ್ಕೃತಿಕ ಚಟುವಟಿಕೆಗಳ Master Mind ಈ ಉದಯ ಶೆಟ್ಟಿ ಅಥವಾ ಉದಯಣ್ಣ. A person with dedication, devotion, excellent writing skills & perfectionist to the core.

ಮೊನ್ನೆ ದಿನ ಉದಯಣ್ಣ ಜೊತೆಗೆ ಕುಂದಾಪುರ ಭಾಗದ ಹೆಸರಾಂತ ಪತ್ರಕರ್ತರು, ಪ್ರಸಿದ್ಧ ಕಾರ್ಯಕ್ರಮ ನಿರೂಪಕರೂ ಆದ ಕೆ. ಸಿ. ರಾಜೇಶ್, ರಾಜ್ಯದ ಪ್ರಬುದ್ಧ ನಿರೂಪಕರಲ್ಲೊಬ್ಬರಾದ ರಾಘವೇಂದ್ರ ಕಾಂಚನ್, ಧಾರ್ಮಿಕ ಚಿಂತಕರಾದ ದಾಮೋದರ ಶರ್ಮ ಇವರೆಲ್ಲರ ಮಧ್ಯೆ ನಾನೂ ಒಬ್ಬ ಎನ್ನುವುದೇ ನನ್ನ ಪಾಲಿಗೆ ಸಂದ ಗೌರವ.ಈ ಮೂವರೆದುರು ಕಾರ್ಯಕ್ರಮ ಪ್ರಸ್ತುತಪಡಿಸುವುದು ಸುಲಭದ ಮಾತಂತು ಅಲ್ಲವೇ ಅಲ್ಲ. ನನ್ನೊಳಗೆ ಇದ್ದಂತಹ Anxiety, ಎದೆಬಡಿತ ಹೆಚ್ಚಾಗಲು ಈ ಮೂರು ಹೆಸರೇ ಸಾಕು! ಅವರ ನಿರೀಕ್ಷೆ ತಲುಪುವುದು ಮರಳಲ್ಲಿ ಕಳೆದುಕೊಂಡ ಪುಟ್ಟ ಚಿನ್ನದುಂಗುರ ಹುಡುಕಿದಂತೆ! ಈ ಮೂವರು Ganguly, Dravid, Laxman ಇದ್ದಂತೆ. ಇಂಥವರು ಗಲ್ಲಿ ಕ್ರಿಕೆಟಿನಲ್ಲಿ ತಕ್ಕ ಮಟ್ಟಿಗೆ ಗಮನ ಸೆಳೆದ ಆಟಗಾರನನ್ನು Fieldನಲ್ಲಿ ಗಮನಿಸಿದ ಭಾವನೆ ನನಗೆ. ಅವರ ಓದು, ಬದುಕಿನ ಕುರಿತ ಸೂಕ್ಷ್ಮ ಗ್ರಹಿಕೆ, ಕಾರ್ಯಕ್ರಮದ ಬಗೆಗಿನ ಕಲ್ಪನೆ ಒಂದಕ್ಕಿಂತ ಒಂದು ಭಿನ್ನ. ಇಂಥವರಿಂದ ಅಭಿನಂದನೆಯ ಮಾತು ಕೇಳ ಸಿಕ್ಕರೆ ನಾನು ಗೆದ್ದಂತೆ. ಮೊನ್ನೆಯ ನನ್ನ ಈ ಪ್ರಯತ್ನದಲ್ಲಿ ನಾನು ಗೆದ್ದಿದ್ದೆನೋ ಇಲ್ಲವೋ ಗೊತ್ತಿಲ್ಲ. ಆದರೆ ಭರಪೂರ ಶ್ರಮ, ತಯಾರಿ ಮತ್ತು ಪ್ರಾಮಾಣಿಕ ಪ್ರಯತವನ್ನಂತೂ ಆತ್ಮಸಾಕ್ಷಿಗೆ ಸರಿಯಾಗಿಯೇ ಮಾಡಿದ್ದೇನೆ.

Udaya Shetty, creative mind of ‘ ಅಭಿಮತ ಸಂಭ್ರಮ ‘.
KC Rajesh is a Well-known Journalist & Master of ceremonies. 
Raghavendra Kanchan
Renowned Anchor, TV presenter & Entrepreneur.
Vasanth Giliyar, Leading from the front- Team Abhimata

If I have reached at least 50% of their expectation, then I think I have won the match.

Thanks, Team Abhimata for the opportunity.
Thanks, Vasant Giliyar.
I dedicate this line to Team Abhimata – Coming together is the beginning, being together is progress, and working together is a success.

Cheers!
Avinash Kamath


 

1 COMMENT

LEAVE A REPLY

Please enter your comment!
Please enter your name here