Home Trending 1 lakh 10 Thd sq.ft New Jayalaxmi Silks Showroom Inauguration & my...

1 lakh 10 Thd sq.ft New Jayalaxmi Silks Showroom Inauguration & my association with them

0

ಉಡುಪಿ ಮಟ್ಟಿಗೆ ಆಗಸ್ಟ್ 24 ಅಕ್ಷರಶಃ ಹಬ್ಬದಂತಿತ್ತು. ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಬನ್ನಂಜೆಗೆ ಸ್ಥಳಾಂತರಗೊಳ್ಳುವ ಗೌಜಿ ಅಂದು. ಉದ್ಯಾವರ ಅಂದ್ರೆ ಜಯಲಕ್ಷ್ಮೀ, ಜಯಲಕ್ಷ್ಮೀ ಅಂದ್ರೆ ಉದ್ಯಾವರ ಎನ್ನುವಷ್ಟರಮಟ್ಟಿಗೆ ಪ್ರಸಿದ್ದಿ ಪಡೆದ ಎಲ್ಲರ ನೆಚ್ಚಿನ ಜವುಳಿ ಮಳಿಗೆಯ 50 ದಶಕದ ಯಾನ ಹಲವು ಕಾರಣಗಳಿಗೆ ವಿಶೇಷವಾಗಿದೆ.

ಅಲ್ಲಿಗೆ ಹೋಗುವುದು ಒಂದು ರೀತಿಯ addiction. !
ಹೀಗೆ ಗ್ರಾಹಕನಾಗಿದ್ದ ನಾನು ಅವರೊಂದಿಗೆ ಸಖ್ಯ ಬೆಳೆದು ಕಳೆದ 7 ವರ್ಷಗಳಿಂದ ಅವರ ಸಂಸ್ಥೆ , ಖಾಸಗಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ಅವಕಾಶ ನನಗೆ ದೊರಕಿದೆ.

ಬನ್ನಂಜೆಯಲ್ಲಿರುವುದು 7 ಮಹಡಿಯ 1 ಲಕ್ಷ 10 ಸಾವಿರ ಚದರಡಿಯ ಬೃಹತ್ ಮಳಿಗೆ. 200 car park ಮಾಡುವಷ್ಟು ವಿಶಾಲ ಜಾಗ! ಒಮ್ಮೆ ಒಳಗೆ ಹೊಕ್ಕರೆ ಸಾಕು ಇನ್ನೂ ಇದೆ, ಮತ್ತೂ ಇದೆ, ನಡೆದಷ್ಟೂ ಇದೆ ಅಂತ ಎನಿಸದಿರದು. ಆಗಸ್ಟ್ 24 ರ ಕಾರ್ಯಕ್ರಮಕ್ಕೆ ಹಲವು ಗಣ್ಯರ ದಂಡೇ ಆಗಮಿಸುವುದಿತ್ತು. ನಾವೆಷ್ಟೇ ಪ್ಲಾನ್ ಮಾಡಿದ್ದರೂ ನಾವಂದುಕೊಂಡ ಹಾಗೆ ನಡೆಯೋದಿಲ್ಲ ಅಂತ ಗೊತ್ತಿತ್ತು. ಆದರೂ 5 ಮೀಟಿಂಗ್ ನಡೆಸಿದ್ದೆವು. ಮೊನ್ನೆಯ ಇಡೀ ದಿನದ ಕಾರ್ಯಕ್ರಮ ನಿರ್ವಣೆ, ನಿರೂಪಣೆ ನನ್ನ ಮಟ್ಟಿಗೆ ಬಹು ದೊಡ್ಡ ಸವಾಲೇ ಆಗಿದ್ದರೂ ಅದನ್ನು ಪ್ರತಿ ಹಂತದಲ್ಲೂ ಸಂಭ್ರಮಿಸಿದ್ದೇನೆ.

ಒಂದೊಂದು ಮಹಡಿ, ಆ ಮಹಡಿಯಲ್ಲಿನ ಪ್ರತ್ಯೇಕ ವಿಭಾಗಗಳನ್ನು ಗಣ್ಯರು ಉಧ್ಘಾಟಿಸಿದರು. ಭರವಸೆ ಇಟ್ಟು ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ನನಗೆ ವಹಿಸಿದ ಜಯಲಕ್ಷ್ಮೀ ಕುಟುಂಬಕ್ಕೆ ಅಭಾರಿ ಮತ್ತು ಧನ್ಯವಾದ. ಚಿತ್ರಗಳು ಇಲ್ಲಿವೆ ನೋಡಿ.

LEAVE A REPLY

Please enter your comment!
Please enter your name here