Home About Me

About Me

ಹುಟ್ಟಿ, ಬೆಳೆದು, ಓದಿದ್ದು ಉಡುಪಿಯಲ್ಲಿ. ನನ್ನ ಹಿರಿಯವರು ಕಾರ್ಕಳದಿಂದ ಧರ್ಮಸ್ಥಳ ಸಾಗುವ ರಸ್ತೆಯಲ್ಲಿ ಸಿಗುವ ನಲ್ಲೂರು ಎಂಬ ಪುಟ್ಟ ಊರಿನವರು. ಉಡುಪಿ ಅಂದ್ರೆ ನನಗೆ ಪ್ರಾಣ. ಹಾಗಾಗಿ ಈ ಊರು ಬಿಟ್ಟು ಉದ್ಯೋಗಕ್ಕಾಗಿ ಇತರ ಕಡೆಗಳಿಗೆ ಹೋಗಲಾಗಲಿಲ್ಲ. ಓದು, ಬರವಣಿಗೆ, ನಿರೂಪಣೆ, ಸಿನೆಮಾಗೀತೆ, ಸಿನಿಮಾ, ಸಾಮಾಜಿಕ ಮಾಧ್ಯಮ, ಜನರು, ಪ್ರಯಾಣ, ಕಾರ್ಯಕ್ರಮ ಆಯೋಜನೆ, ಬ್ರಾಂಡಿಂಗ್ ಹೀಗೆ ಹಲವು ಕ್ಷೇತ್ರಗಳಲ್ಲಿ ನನಗೆ ಆಸಕ್ತಿ. ಈವರೆಗಿನ ನನ್ನ ಪ್ರಯಾಣದಲ್ಲಿ ಹೇಳದೆ ಉಳಿದ ವಿಚಾರಗಳು ನೂರಿದೆ. ಅದೆಲ್ಲವನ್ನು ಹೇಳಬೇಕು, ಹಂಚಬೇಕು, ದಾಖಲಿಸಬೇಕೆಂಬ ಹಂಬಲ ನನ್ನದು. 2 ವರ್ಷದ ಹಿಂದೆಯೇ ಆರಂಭಿಸಬೇಕಿತ್ತು. ಕಾಲ ಈಗ ಕೂಡಿ ಬಂದಿದೆ.

ನೀವು ನನ್ನೊಂದಿಗಿದ್ದರೆ ಹೇಳಲು ಸಾವಿರ ಮಾತಿದೆ..